BTW_JUNE7_1C

ಬಂಟ್ವಾಳ: ಇಲ್ಲಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಚಿಣ್ಣರ ಮನೆಯ ನೂತನ ಸಾಲಿನ ಆರಂಭೋತ್ಸವ, ಒಂದರಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಗುರುವಾರ ಶಾಲೆಯಲ್ಲಿ ನಡೆಯಿತು.

ನೂತನ ವಿದ್ಯಾರ್ಥಿಗಳಿಗೆ ಗಣ್ಯರು ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ರೋಟರಿ ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ರೋಟರಿ ಸಂಸ್ಥೆ ಆರಂಭದಿಂದಲೂ ಬಿ.ಮೂಡ ಶಾಲೆಗೆ ಸಹಕಾರವನ್ನು ನೀಡಿದೆ. ಅದನ್ನು ಮುಂದಿನ ದಿನಗಳಲ್ಲೂ ನಾವು ಮುಂದುವರೆಸಿ ಕೊಂಡು ಹೋಗಲು ಬದ್ದರಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರಾ, ತಾ.ಪಂ.ಸದಸ್ಯ ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಭಾಸ್ಕರ ಟೈಲರ್, ಸ್ವಣೋದ್ಯೋಮಿ ಸುನಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಶಾಲಾಭಿವೃದ್ದಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಲಾಲ್,   ಹಳೆ ವಿದ್ಯಾರ್ಥಿ ಜಯಂತ ಅಗ್ರಬೈಲು, ರೋಟರಿ ಕ್ಲಬ್ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನಿಯೋಜಿತ ಕಾರ್ಯದರ್ಶಿ ಶಿವಾನಿ ಬಾಳಿಗ, ಸದಸ್ಯರಾದ ಪ್ರಕಾಶ್ ಬಾಳಿಗ, ವಸಂತ ಪ್ರಭು, ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಆಟಗಾರ ಬೇಬಿ ಕುಂದರ್, ಸ್ನೇಹಾಂಜಲಿ ಯುವಕ ಸಂಘದ ಅಧ್ಯಕ್ಷ ನಾಗೇಶ್,  ಇಂದಿರಾ ಚಂದಪ್ಪ, ಮಮತಾ ಕುಪ್ಪಿಲ, ಮುಖ್ಯ ಶಿಕ್ಷಕಿ ಕುಶಲ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಸುಶೀಲ ಸ್ವಾಗತಿಸಿ, ಎಸ್‍ಡಿಎಂಸಿ ಅಧ್ಯಕ್ಷ ಶ್ರೀಧರ ಅಮೀನ್ ಪ್ರಸ್ತಾವನೆಗೈದರು. ದೈಹಿಕ ಶಿಕ್ಷಕ ನವೀನ್ ಕಾರ್ಯಕ್ರಮ ನಿರೂಪಿಸಿದರು.

BTW_JUNE7_1B

BTW_JUNE7_1A

By suddi9

Leave a Reply

Your email address will not be published. Required fields are marked *