ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ ಸೆ.1ರಿಂದ ‘ವಿಮಾ ಸಪ್ತಾಹ’ ಕಾರ್ಯಕ್ರಮ ನಡೆಯಲಿದೆ. ಸೆ.1ರಂದು ಬೆಳಿಗ್ಗೆ ಪ್ರಥಮ ಗ್ರಾಹಕರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಸೆ.2ರಂದು ಫರಂಗಿಪೇಟೆ ಸಮೀಪದ ಮೇರಮಜಲು ವೃದ್ಧಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ ನಡೆಯಲಿದೆ. ಸೆ.3ರಂದು ಎಲ್ಲೈಸಿ ಸಿಬ್ಬಂದಿಗಳಿಗೆ ವಿವಿಧ ಸ್ಪರ್ದೆ, ಸೆ.4ರಂದು ಶಾಲಾ ಮಕ್ಕಳಿಗೆ ಭಾಷಣ ಸ್ಪರ್ದೆ, ಸೆ.5ರಂದು ಎಲ್ಲೈಸಿ
ಪ್ರತಿನಿಧಿಗಳಿಗೆ ವಿವಿಧ ಸ್ಪರ್ದೆ, ಸೆ.6ರಂದು ವಿದ್ಯಾಥರ್ಿಗಳಿಗೆ ವಿವಿಧ ಸ್ಪರ್ದೆ ಮತ್ತು ಸಾಧಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಖಾಧಿಕಾರಿ ಸಿ.ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *