ಸುದ್ದಿ9ಬಂಟ್ವಾಳ ; ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಇದರ ಉಪ ಪ್ರಾಂಶುಪಾಲ ಚೆನ್ನಗಿರಿ ಗೌಡ ಮತ್ತು ಉಪನ್ಯಾಸಕಿ ತೇಜಸ್ವಿನಿಯವರು ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ರೀತಿಯ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಉಪನ್ಯಾಸಕರ ಅಮಾನತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರವೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಉಪ ಪ್ರಾಂಶುಪಾಲ ಚೆನ್ನಗಿರಿ ಗೌಡ ಹಾಗೂ ಉಪನ್ಯಾಸಕಿ ತೇಜಸ್ವಿನಿ ವಿರುದ್ದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹ ರ್ಷಿತ್ ಡಿಸೋಜ ವಿದ್ಯಾ ರ್ಥಿ ಗಳಿಗೆ ಟಿ.ಸಿ ನೀಡುವ ಬೆದರಿಕೆ ಒಡ್ಡುವುದಲ್ಲದೆ ಅನುಚಿತವಾಗಿ ವತರ್ಿಸುತ್ತಿದ್ದು ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಖಂಡನೀಯ ಎಂದರು. ಉಪನ್ಯಾಸಕರು ಸರಿಯಾಗಿ ಕಾಲೇಜಿಗೆ ಬರುವುದಿಲ್ಲ ಬಂದರೂ ಕ್ಲಾಸ್ ತೆಗೆದುಕೊಳ್ಳುವುದಿಲ್ಲ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ , ಇಂಟರ್ನಲ್ ಮಾಕ್ಸರ್್, ಲ್ಯಾಬ್ ಮಾಕ್ಸರ್್, ಪ್ರಾಯೋಗಿಕ ಅಂಕಗಳನ್ನು ನಾವು ನೀಡುವುದರಿಂದ ವಿದ್ಯಾಥರ್ಿಗಳು ಬಾಯಿ ಬಿಟ್ಟರೆ ಜಾಗ್ರತೆ ಎನ್ನುವ ದರ್ಪವನ್ನು ಉಪಾನ್ಯಾಸಕರು ತೋರ್ಪಡಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ನಂತರ ಮಾತನಾಡಿದ ವಿದ್ಯಾಥರ್ಿ ರಂಜಿತ್ ಪ್ರಾಂಶುಪಾಲರು ಹಾಗೂ ಚೆನ್ನಗಿರಿ ಗೌಡರು ಪ್ರತಿನಿತ್ಯ ಸಂಸ್ಥೆಗೆ ಬರುವುದು ಮದ್ಯಾಹ್ನದ ನಂತರ ಆದ ಕಾರಣ ವಿದ್ಯಾರ್ಥಿಳಿಗೆ ಮತ್ತು ಪೋಷಕರಿಗೆ ಕಛೇರಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಿಕೊಳ್ಳಲು ತುಂಬಾ ಹೊತ್ತು ಕಾಯುವ ಪರಿಸ್ಥಿತಿ ನಿಮರ್ಾಣವಾಗಿದೆ. ಪ್ರಾಂಶುಪಾಲರ ಸಹಿಗಾಗಿ ದಿನವಿಡೀ ಕಾದು ತರಗತಿಗೆ ಗೈರು ಹಾಜರಾದ ಅನೇಕ ದೃಷ್ಟಾಂತಗಳಿವೆ ಎಂದು ಆಪಾದಿಸಿದರು.
ಅ.ಭಾ.ವಿ.ಪ ಎಚ್ಚರಿಕೆ: ವಿದ್ಯಾಥರ್ಿ ಸಮುದಾಯದ ಮೇಲಾದ ಅನ್ಯಾಯವನ್ನು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಬಂಟ್ವಾಳ ಘಟಕವು ಖಂಡಿಸಿದ್ದು ತಾಂತ್ರಿಕ ಶಿಕ್ಷಣ ಇಲಾಖೆಯ ನಿ ರ್ದೇ ಶಕರಾದ ಎಸ್. ಕೆ. ತಳವಾರ್ ಅವರಿಗೆ ಈ ಉಪನ್ಯಾಸಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದೆ. ಅಲ್ಲದೆ ತಮ್ಮ ಬೇಡಿಕೆಯು ಈಡೇರದಿದ್ದಲ್ಲಿ ಸೋಮವಾರದಂದು ತಾಲೂಕಿನಾದ್ಯಂತ ಎಲ್ಲಾ ಕಾಲೇಜು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ನಾಯಕರಾದ ರಾಘವೇಂದ್ರ, ಜೀತ್ರಾಜ್, ಭರತ್ರಾಜ್, ಅಶ್ವಥ್, ಧನುಶ್ ಹಾಗೂ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಪ್ರಮುಖರಾದ ಪ್ರಜ್ವಲ್ ಬಂಗೇರ, ವಾಸುದೇವ ಭಟ್ ತಾಲೂಕು ಸಂಚಾಲಕ ಪ್ರಣಾಮ್ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.
IMG-20140828-WA0042

IMG-20140828-WA0044

By suddi9

Leave a Reply

Your email address will not be published. Required fields are marked *