RENUKA3

ಕೋಲಾರ: ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಬಾಲಭವನ ಸೊಸೈಟಿ ಹಾಗೂ “ತೇಜಸ್ವಿನಿ ಸಾಂಸ್ಕೃತಿಕ ಕಲಾ ಸಂಘ” ಸೋರೆಗೌಡನಕೋಟೆ ಸಹಯೋಗದೊಂದಿಗೆ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಮೇ 25 ರಿಂದ ಬಂಗಾರಪೇಟೆಯಲ್ಲಿ ನಡೆಯುತ್ತಿದೆ ಎಂದು ತೇಜಸ್ವನಿ ಕಲಾ ಸಂಘದ ಅಧ್ಯಕ್ಷೆ ಬಿ.ಕೆ. ರೇಣುಕಾ ತಿಳಿಸಿದ್ದಾರೆ.

ಶಿಬಿರದಲ್ಲಿ ಕರಾಟೆ, ಚಿತ್ರಕಲೆ, ಜನಪದ ಗಾಯನ, ಜನಪದ ನೃತ್ಯ, ಯೋಗ ಭರತನಾಟ್ಯ, ಕರಕುಶಲ ವಸ್ತುಗಳ ತರಬೇತಿ ನೀಡುತ್ತಿದ್ದು,  10 ರಿಂದ 16 ವರ್ಷದ ವಯಸ್ಸಿನ ಮಕ್ಕಳಿಗೆ ಶಿಬಿರದಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಶಿಕ್ಷಕರು ತರಬೇತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಿಕ್ಷಕರಾದ ಕರಾಟೆ -ಆರತಿ, ಚಿತ್ರಕಲೆ ಮತ್ತು ಕರಕುಶಲ -ಶೋಬರಾಣಿ, ಯೋಗ-ಕೃಷ್ಣಯ್ಯ, ಜನಪದ ಗಾಯನ-ಸುಬ್ರಮಣಿ, ಭರತನಾಟ್ಯ-ತೇಜಶ್ರೀ, ಶಾಸ್ತ್ರೀಯ ಸಂಗೀತ- ರೇಣುಕಾ, ತರಬೇತಿಯನ್ನು ನೀಡುತ್ತಿದ್ದು ಇಲಾಖೆಯ ವ್ಯವಸ್ಥಾಪಕ ವಿನೋದ, ಹಾಗೂ ಜ್ಯೋತಿಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RENUKA

RENUKA4

RENUKA1

By Suddi9

Leave a Reply

Your email address will not be published. Required fields are marked *