ಶ್ರೀನಿವಾಸಪುರ: ರಾಜ್ಯದಲ್ಲಿ ಪಕ್ಷಕ್ಕೆ ಕಡಿಮೆ ಸ್ಥಾನಗಳು ಬಂದಿದ್ದು, ಜನತೆಯಿಂದ ನಾವು ಸೋತಿಲ್ಲ. ಕೆಲವು ಕಾರಣಗಳಿಂದ ಬಲಿಪಶುವಾಗಿದ್ದೇವೆ. ಆದರೂ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಯೋಜನೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಾರಿ ಮಾಡಲಿದ್ದಾರೆಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ.
ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ನೂತನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಕೇಕ್ ಕತ್ತರಿಸಿ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಈಗಾಗಲೇ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಕುಮಾರಸ್ವಾಮಿ ರವರು ಯೋಜನೆಗಳನ್ನು ನೆರವೇರಿಸಲು ಬದ್ದರಾಗಿದ್ದಾರೆ. ಆದರೂ ಸಮಿಶ್ರ ಸರ್ಕಾರವಾಗಿದೆ ಪ್ರಣಾಳಿಕೆಯಲ್ಲಿ ಮುಖ್ಯವಾದ ಸಾಲಮನ್ನಾ ವಿಚಾರದಲ್ಲಿ ಮಿತ್ರಪಕ್ಷ ಕಾಂಗ್ರೆಸ್ನೊಂದಿಗೆ ಚರ್ಚೆ ಮಾಡಿ 15 ದಿನಗಳಲ್ಲಿ ಜಾರಿ ಮಾಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಎಲ್ಲಾ ರೈತರ ಮುಂದೆ ಕುಮಾರಸ್ವಾಮಿರವರು ತಿಳಿಸಿದ್ದಾರೆಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇನ್ನು 30 ಸ್ಥಾನಗಳನ್ನು ಗಳಿಸಬೇಕಾಗಿತ್ತು. ಕೆಲವು ಕಾರಣಗಳಿಂದ ಕಡಿಮೆ ಸ್ಥಾನಗಳು ಕಡಿಮೆ ಬಂದಿದೆ. ಆದರೂ ಮತದಾರರು ಜೆಡಿಎಸ್ನ್ನು ಬೆಂಬಲಿಸಿದ್ದಾರೆ. ಹಾಗಾಗಿ ಈ ಜಿಲ್ಲೆಯ ಮತದಾರರಿಗೂ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಕೆ.ಸಿ ವ್ಯಾಲಿ ಯೊಜನೆಯ ನೀರು ಹರಿಸು ಬಂದಿದೆ. ಆದರೆ ಈ ನೀರನ್ನು ಮತ್ತಷ್ಟು ಶುದ್ಧಿ ಗೊಳಿಸಿ ಭೂಮಿ, ಬೆಳೆ ಜನರಿಗೆ ತೊಂದರೆಯಾಗದಂತೆ ವಿಜ್ಞಾನಿಗಳ ಸಲಹೆ, ಪರೀಕ್ಷೆ ಮಾಡುವ ಮೂಲಕ ಈ ನೀರು ಕೊಡಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರಸ್ತುತ ಶಿಕ್ಷಕರ ಆಗ್ನೇಯ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಪರವಾಗಿ ಸ್ಪರ್ಧಿಸಿರುವ ರಮೇಶ್ಬಾಬು ರವರನ್ನು ಗೆಲ್ಲಿಸುವ ಮೂಲಕ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಹಿರಿಯ ವಕೀಲ ಹಾಗೂ ಜೆಡಿಎಸ್ ತಾಲ್ಲೂಕು ಮುಖಂಡ ಕೇಶವಪ್ಪ, ಬಿ.ವೆಂಕಟರೆಡ್ಡಿ, ಜಿ.ರಾಜಣ್ಣ, ಶಿವಪುರ ಗಣೇಶ್, ತಾ.ಪಂ. ಸದಸ್ಯ ಚಲ್ದಿಗಾನಹಳ್ಳಿ ಮೋಹನ್, ಬೈರಾರೆಡ್ಡಿ, ಪಾತಪೇಟೆ ನಾರಾಯಣಸ್ವಾಮಿ ಲಕ್ಷ್ಮಣ್ರೆಡ್ಡಿ, ಎ.ಎನ್.ಜಗದೀಶ್, ಎಸ್.ಆರ್.ಮುನಿಕ್ರಿಷ್ಣ, ಮೇಸ್ತ್ರೀ ಸೀನಪ್ಪ, ಪೂಲು ಶಿವಾರೆಡ್ಡಿ, ಹೋಳೂರು ಸಂತೋಷ್, ಸೋನಿ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

