ಕುಪ್ಪೆಪದವು: ಎಸ್ ಪಿವೈಎಸ್ ಎಸ್ ಕರ್ನಾಟಕ ಆಶ್ರಯದಲ್ಲಿ ಇಲ್ಲಿನ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯುತ್ತಿರುವ ಯೋಗ ಶಿಕ್ಷಣ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಶಾಖೆ ವತಿಯಿಂದ ಮಾತೃ ವಂದನ ಮತ್ತು ಮಾತೃ ಭೋಜನ ಕಾರ್ಯಕ್ರಮ ನಡೆಯಿತು.
ಈ ವೇಳೆ ಕೈಕಂಬ ಶ್ರೀರಾಮ ಶಾಖೆಯ ಯೋಗ ಶಿಕ್ಷಕಿ ರೇಖಾ ಪ್ರಾಸ್ತಾವಿಕ ಮಾತನಾಡಿ ಯೋಗದ ಬಗ್ಗೆ ಮಾಹಿತಿ ನಿಡಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ವಲಯದ ಸಂಘಟನಾ ಪ್ರಮುಖ ಸುಬ್ಬರಾವ್ ಪೊಳಲಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ಸಮುದಾಯ ಭವನ ಸಮಿತಿಯ ಅಧ್ಯಕ್ಷ ಹಿರಣ್ಯಾಕ್ಷ ಕೋಟ್ಯಾನ್ ಹಾಗೂ ಕುಪ್ಪೆಪದವು ಸಮಾಗಮದ ಪುರುಷೋತ್ತಮ.ಕೆ ಮತ್ತಿತರರು ಉಪಸ್ಥಿತರಿದ್ದರು.
ಸ್ವಪ್ನಾ ಸ್ವಾಗತಿಸಿ,ಶ್ವೇತಾ ವಂದಿಸಿದರು. ಭಾರತಿ ಕಾರ್ಯಕ್ರಮವನ್ನು ನಿರೂಪಿಸಿದರು.

