ಬಂಟ್ವಾಳ: ಪೋಲಿಸ್ ಇಲಾಖೆಯಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್ಸೈ ಶಾಂತಪ್ಪ ಅವರ ಬೀಳ್ಕೊಡುಗೆ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡು ನಗರ ಪೋಲಿಸ್ ಠಾಣೆಯಲ್ಲಿ ನಡೆಯಿತು.
ಈ ವೇಳೆ ಡಿವೈಎಸ್ಪಿ ಶ್ರೀನಿವಾಸ್ ಮಾತನಾಡಿ, ನಮ್ಮ ಕರ್ತವ್ಯದಲ್ಲಿ ನಿಷ್ಠೆ, ಪ್ರಮಾಣಿಕತೆ ನಿವೃತ್ತಿಯ ನಂತರವೂ ನಮ್ಮ ಜೊತೆಯಲ್ಲಿ ಇರುತ್ತದೆ. ಒತ್ತಡದ ಕೆಲಸದ ನಡುವೆ ಪೋಲೀಸರು ಆರೋಗ್ಯದ ಕಡೆ ಗಮನ ಕೊಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೋ.ಐಪಿಎಸ್ ಅಕ್ಷಯ್ ಎಂ ಹಾಕೆ, ಬಂಟ್ವಾಳ ಸಿಐ ಪ್ರಕಾಶ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ, ನಗರ ಠಾಣಾ ಅಪರಾದ ವಿಭಾಗದ ಎಸ್ಸೈ ಹರೀಶ್, ನಗರ ಠಾಣಾ ಪೋಲೀಸ್ ಉಪನಿರೀಕ್ಷಕ ಚಂದ್ರಶೇಖರ, ಟ್ರಾಫಿಕ್ ಠಾಣಾ ಎಸ್ಸೈ ವಿಠಲ ಶೆಟ್ಟಿ, ಎಎಸ್ಸೈಗಳಾದ ಸೀತರಾಮ, ಜಯರಾಮ ರೈ, ಜಿನ್ನಪ್ಪ ಗೌಡ, ಸಂಜೀವ, ಸಿಬ್ಬಂದಿ ಗಳಾದ ಕ್ರಷ್ಣ ಕುಲಾಲ್, ಕರೀಂ, ಮತ್ತಿತರರು ಉಪಸ್ಥಿತರಿದ್ದರು.
ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಪ್ರೋ.ಎಸ್ಸೈ ಸೌಮ್ಯ ಸ್ವಾಗತಿಸಿ, ವಂದಿಸಿದರು.

