ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಜು.2ರಂದು ತಾಲೂಕಿನ ಹಲವೆಡೆ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 2ಕ್ಕೆ ಬಿ.ಸಿ.ರೋಡಿನ ಬಿಜೆಪಿ ಕಚೇರಿಯಿಂದ ಹೊರಡಲಿರುವ ವಿಜಯೋತ್ಸವ ಮೆರವಣಿಗೆ ಗಾಣದಪಡ್ಪು, ನೆರೆ ವಿಮೋಚನಾ ರಸ್ತೆ, ಪೇಟೆ-ಬಡ್ಡಕಟ್ಟೆ, ಜಕ್ರಿಬೆಟ್ಟು ಮೂಲಕ ಬೈಪಾಸ್ ರಾಮನಗರ ಜಂಕ್ಷನ್ ವರೆಗೆ ಸಂಚರಿಸಲಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

