54073d5284efacd27b20ffa699d3fa6c

ಪಡುಬಿದ್ರೆ: ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಭಾರೀ ಮಳೆಗೆ ಮಂಗಳವಾರ ಕೊಚ್ಚಿ ಹೋಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ನಿಧಿ ಆಚಾರ್ಯ(9) ಶವವಾಗಿ ಪತ್ತೆಯಾಗಿದ್ದಾಳೆ. 16 ಗಂಟೆಗಳ ಬಳಿಕ ನಿಧಿಯ ಮೃತ ದೇಹ ಪತ್ತೆಯಾಗಿದೆ.ಪಾದೆಬೆಟ್ಟು ಉಮೇಶ್ ಆಚಾರ್ಯ ಮತ್ತು ಆಶಾ ದಂಪತಿಯ ಪುತ್ರಿಯಾಗಿರುವ ನಿಧಿ ಮತ್ತು ನಿಶಾ ಪಡುಬಿದ್ರೆಯ ಎಸ್ ಬಿ ವಿ ಪಿ ಹಿರಿಯ ಪ್ರಾರ್ಥಿಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು.

 

ಸ್ಕೂಲ್ ಬ್ಯಾಗ್, ಜಾಕೆಟ್ ಧರಿಸಿದ್ದ ನಿಧಿ ಘಟನಾ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಪತ್ತೆಯಾಗಿದ್ದಾಳೆ. ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಂಗಳವಾರ ನಿಧಿ ತನ್ನ ಅಕ್ಕ ನಿಶಾ ಜೊತೆಯಾಗಿ ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದಳು. ಪಟ್ಲ ಎಂಬಲ್ಲಿ ಕಿರು ಸೇತುವೆ ದಾಟುವಾಗ ಅವಘಡವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರು ಸೇತುವೆ ಮೇಲೆ ಬಂದಿತ್ತು. ಆ ರಭಸಕ್ಕೆ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.
ನಿಶಾ ಆಚಾರ್ಯಳನ್ನು ಸ್ಥಳೀಯರು ರಕ್ಷಿಸಿದರು. ಆದರೆ ಕಣ್ಮರೆಯಾದ ನಿಧಿ ಈಗ ಶವವಾಗಿ ಪತ್ತೆಯಾಗಿದ್ದಾಳೆ.

By suddi9

Leave a Reply

Your email address will not be published. Required fields are marked *