ಉಡುಪಿ: ಜೆಸಿಐ ಪರ್ಕಳ ವತಿಯಿಂದ ಬಹುಘಟಕ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಮಣಿಪಾಲ ಮಧುವನ್ ಸೇರಾಯ್ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಜೆಸಿಐ ವಲಯ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮಾತನಾಡಿ, ತರಬೇತಿಯಿಂದ ವ್ಯಕ್ತಿತ್ವದಲ್ಲಿ ಬದಲಾವಣೆ ತರಲು ಸಾಧ್ಯ. ಉತ್ತಮ ಅಲೋಚನೆಯಿಂದ ಉತ್ತಮ ಕಾರ್ಯ ನಡೆಯುತ್ತದೆ. ಹೀಗಾಗಿ ನಾವೆಲ್ಲರೂ ಒಂದಾಗಿ ಹೊಸ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಅದ್ಯಕ್ಷತೆ ವಹಿಸಿದ್ದರು. ಉದ್ಯಮಿ, ಹಂಸ ಚೈತನ್ಯ ಸಹಕಾರಿ ಸಂಘದ ಅಧ್ಯಕ್ಷ ಸುಧೀಶ್ ನಾಯ್ಕ್, ಜೆಸಿಐ ರಾಷ್ಟ್ರೀಯ ತರಬೇತುದಾರ ವಿಶ್ವನಾಥ.ಟಿ. ಬಳ್ಳಾರಿ, ವಲಯ ಉಪಾಧ್ಯಕ್ಷ ರಘುನಾಥ ನಾಯ್ಕ್, ಅಕ್ಷತಾ ಗಿರೀಶ್, ರವಿ ಕಕ್ಕೆಪದವು, ಪಶುಪತಿ ಶರ್ಮಾ, ಧೀರೇಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಘಟಕಾಧ್ಯಕ್ಷ ದೇವೇಂದ್ರ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಜಸ್ವಂತ್ ಜೋಗಿ ಕಾರ್ಯಕ್ರಮದಲ್ಲಿ ವಂದಿಸಿದರು.

