dc-Cover-67jfrtlvkpfe8qpn13o48dm0i3-20171101011318.Medi

ಕುಂದಾಪುರ: ದೇಶದ ಅಪ್ರತಿಮ ಕಾರ್ಮಿಕ ವರ್ಗದ ಸಂಘಟನೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಿಐಟಿಯುಗೆ ಇದೇ ಮೇ 30 ರಂದು ದೇಶದಾದ್ಯಂತ ತನ್ನ 48 ನೇ ವರ್ಷದ ಆಚರಣೆ ಕಾರ್ಮಿಕ ಸಂಘಗಳು ಆಚರಿಸುತ್ತಿವೆ.ಕರ್ನಾಟಕ ರಾಜ್ಯದಲ್ಲಿಯೂ ಹಲವು ಕಡೆಗಳಲ್ಲಿ ವಿಚಾರ ಸಂಕಿರಣ,ಸಾಂಸ್ಕ್ರತಿಕ ಕಾರ್ಯಕ್ರಮಗಳು,ಸಭೆಗಳು ನಡೆಯಲಿದ್ದು ಕುಂದಾಪುರದಲ್ಲಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯು ವಿಚಾರ ಸಂಕೀರಣ ನಡೆಸಲಿದೆ.

“ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಕಾರ್ಮಿಕ ವರ್ಗದ ಜವಬ್ದಾರಿ”ಎಂಬ ವಿಷಯದಲ್ಲಿ ಹಂಪಿ ವಿಶ್ವ ವಿದ್ಯಾಲಯದ ಪ್ರೋ.ಚಂದ್ರಪೂಜಾರಿ ರವರು ವಿಚಾರ ಮಂಡಿಸಲಿದ್ದಾರೆ. ಸಿಐಟಿಯು ಉಪಾದ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಉಪಸ್ಥತರಿದ್ದು ಸಿಐಟಿಯು ಜಿಲ್ಲಾದ್ಯಕ್ಷರಾದ ಪಿ.ವಿಶ್ವನಾಥ ರೈ ಅದ್ಯಕ್ಷತೆ ವಹಿಸಲಿದ್ದಾರೆ. ನಾಳೆ ಮದ್ಯಾಹ್ನ 3ಗಂಟೆ ಹಂಚುಕಾರ್ಮಿಕ ಭವನದಲ್ಲಿ ಜರುಗಲಿದ್ದು ಪ್ರಗತಿಪರರು,ಕಾರ್ಮಿಕ ವರ್ಗ ಭಾಗವಹಿಸಬೇಕೆಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *