ನವದೆಹಲಿ: ಸ್ವಿಝರ್ಲಾಂಡಿನ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಇಟ್ಟ ಭಾರತೀಯ ಕುಳಗಳನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಟಿಡಿ) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಇದರ ಗೌಪ್ಯ ಮಾಹಿತಿಯನ್ನು ಭಾರತಕ್ಕೆ ಕೊಡಲು ಹಿಂದೇಟು ಹಾಕಿದ್ದರು. ಇದನ್ನು ಮನಗಂಡ ಸಿಟಿಬಿಡಿ ತಾವೇ ಕಾರ್ಯಾಚರಣೆ ನಡೆಸಿ ರಹಸ್ಯ ದಾಖಲೆಗಳನ್ನು ಪತ್ತೆಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಇದರಿಂದ ಭಾರತದ ಬೊಕ್ಕಸದ ಹಣ ಏರಿಕೆಯಾಗುವ ಸಧ್ಯತೆ ಇದೆ.
ಆನಧಿಕೃತ ಮೂಲಗಳಿಂದ ಸಂಪಾದಿಸಿದ ಕೆಲ ಮಾಹಿತಿಗಳ ಸಹಾಯದಿಂದ ನೂರು ಜನರ ಗೌಪ್ಯ ಪಟ್ಟಿಯನ್ನು ಸಿಬಿಡಿಟಿ ತಯಾರಿಸಿತ್ತು. ಗೌಪ್ಯಪಟ್ಟಿಯಲ್ಲಿದ್ದ ಹೆಸರುಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದ ಸಿಬಿಡಿಟಿ, ಇವರ ವ್ಯವಹಾರಗಳ ವಿವರ ನೀಡುವಂತೆ ಸೂಚಿಸಿತ್ತು. ಜೊತೆಗೆ, ಪಟ್ಟಿಯಲ್ಲಿದ್ದವರನ್ನು ತೆರಿಗೆ ವಂಚಕರೆಂದು ಪರಿಗಣಿಸುವಂತೆಯೂ ಸೂಚಿಸಿತ್ತು. ಆದರೆ, ಇವರನ್ನು ‘ಉದ್ದೇಶಪೂರ್ವಕ ತೆರಿಗೆ ವಂಚಕ’ರೆಂಬ ಹಣೆಪಟ್ಟಿಯಿಂದ ಹೊರಗಿಡಲು ಸೂಚಿಸಿತ್ತು. ಈ ವಿವರಗಳನ್ನಾಧರಿಸಿ, ಠೇವಣಿದಾರರನ್ನು ಸಂಪರ್ಕಿಸಿದ್ದ ಸಿಬಿಡಿಟಿ, ಮಾಹಿತಿ ನೀಡಿದರೆ ಕನಿಷ್ಠ ಶಿಕ್ಷೆಗೆ ಒಳಪಡಿಸುವ ಆಮಿಷವನ್ನೂ ನೀಡಿತ್ತು. ಇದಕ್ಕೊಪ್ಪಿದ್ದ ಸುಮಾರು 100ಕ್ಕೂ ಹೆಚ್ಚು ಮಂದಿ ತಮ್ಮ ಕಪ್ಪುಹಣದ ಬಗ್ಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.

