4

 

ಮಲ್ಪೆ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ನೂರಾರು ಕಾರ್ಯಕರ್ತರೊಂದಿಗೆ  ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಂಚರಿಸಿ ಬಿರುಸಿನ ಮತ ಪ್ರಚಾರ ನಡೆಸಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಪ್ರಮೋದ್‌ ಅವರು, ಕಳೆದ 5 ವರ್ಷಗಳಲ್ಲಿ ಮೀನುಗಾರಿಕೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ. ಮಲ್ಪೆಯಲ್ಲಿ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ, ಬಂದರಿನಲ್ಲಿ ಸುಮಾರು 7.75 ಕೋ. ರೂ. ವೆಚ್ಚದಲ್ಲಿ ಡ್ರಜ್ಜಿಂಗ್‌ ಕಾಮಗಾರಿ, ಉಡುಪಿಯ ಹಳೆಮೀನು ಮಾರುಕಟ್ಟೆಯನ್ನು 2.30 ಕೋ. ರೂ. ಅನುದಾನದಲ್ಲಿ ನವೀಕರಿಸಿ ದೇಶದಲ್ಲೇ ಪ್ರಪ್ರಥಮ ಹೈಟೆಕ್‌ ಮೀನು ಮಾರುಕಟ್ಟೆ ನಿರ್ಮಾಣ, ಶಿಥಿಲಾವಸ್ಥೆಯಲ್ಲಿದ್ದ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ಸುಸಜ್ಜಿತವಾಗಿ ಅಭಿವೃದ್ಧಿ, ಬಂದರಿನಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆ, ಮೀನು ಏಲಂ ಮಾಡುವ ನೆಲಕ್ಕೆ ಮಾರ್ಬಲ್‌ ಅಳವಡಿಸಿ ಶುಚಿತ್ವಕ್ಕೆ ಒತ್ತು, ಒಣಮೀನು ಒಣಗಿಸುವ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹೈಮಾಸ್ಟ್‌ ದೀಪ ಅಳವಡಿಸಿ ಮೀನು ಕಳ್ಳತನಕ್ಕೆ ಬೇಕ್‌ ನೀಡಲಾಗಿದೆ ಎಂದರು.

 

By suddi9

Leave a Reply

Your email address will not be published. Required fields are marked *