ಬೆಳ್ತಂಗಡಿ: 1889ರಲ್ಲಿ ಮಡಂತ್ಯಾರು ಸೇಕ್ರೆಡ್ಹಾರ್ಟ್ ಇಗರ್ಜಿ ಅಸ್ತಿತ್ವಕ್ಕೆ ಬಂದಿದ್ದು, ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಹಿನ್ನೆಲೆಯಲ್ಲಿ ಮೇ 2ರಂದು ಸಂಭ್ರಮಾಚರಣೆಯನ್ನುಹಮ್ಮಿಕೊಳ್ಳಲಾಗಿದೆ ಎಂದು ಮಡಂತ್ಯಾರು ಇಗರ್ಜಿಯ ಪ್ರಧಾನ ಧರ್ಮಗುರು ಬೇಸಿಲ್ ವಾಸ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2 ರಂದು ಬೆಳಗ್ಗೆ 9ಕ್ಕೆ ಬಲಿಪೂಜೆಯೊಂದಿಗೆ ಸಂಭ್ರಮಾಚರಣೆ ಆರಂಭಗೊಳ್ಳಲಿದೆ. ಐವರು ಬಿಷಪರು, 50ಕ್ಕೂ ಹೆಚ್ಚು ಧರ್ಮಗುರುಗಳು ಮತ್ತು 3,000ಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಪೂಜೆ ನಡೆಯಲಿದ್ದು, ಪೂಜಾ ವಿಧಿ ವಿಧಾನಗಳನ್ನು ಮಂಗಳೂರು ಬಿಷಪ್ ರೈ| ರೆ| ಡಾ| ಅಲೋಶಿಯಸ್ ಡಿ’ಸೋಜಾ ನಿರ್ವಹಿಸುವರು.
ಬಳಿಕ ಸಂಜೆ 4ಕ್ಕೆ ಮಡಂತ್ಯಾರು ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಬಳಿಕ ವಿಶೇಷ ಬಲಿಪೂಜೆಯನ್ನು ಮಂಗಳೂರು ಧರ್ಮ ಪ್ರಾಂತದ ಕಾನೂನು ಮತ್ತು ನ್ಯಾಯ ವಿಭಾಗದ ಮುಖ್ಯಸ್ಥ ವಂ| ವಾಲ್ಟರ್ ಡಿ’ಮೆಲ್ಲೊ ನೆರವೇರಿಸುವರು ಎಂದು ವಿವರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಷಪ್ ರೈ| ರೆ| ಡಾ| ಅಲೋಶಿಯಸ್ ಡಿ’ಸೋಜಾ ವಹಿಸುವರು. ಮುಖ್ಯ ಅತಿಥಿಗಳಾಗಿ ಪಾಟ್ನ ಧರ್ಮಪ್ರಾಂತದ ರೈ| ರೆ| ಡಾ| ವಿಲಿಯಂ ಡಿ’ಸೋಜಾ ಎಸ್.ಜೆ., ಬೆಳ್ತಂಗಡಿ ಬಿಷಪ್ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ, ಬಳ್ಳಾರಿ ಬಿಷಪ್ ರೈ| ರೆ| ಡಾ| ಹೆನ್ರಿ ಡಿ’ಸೋಜಾ, ಪುತ್ತೂರು ಬಿಷಪ್ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಾರRರಿಯೋಸ್, ಅರ್ಸುಲೈನ್ ಫ್ರಾನ್ಸಿಸ್ಕನ್ ಸಿಸರ್ನ ಮದರ್ ಜನರಲ್ ವಂ| ಸಿ| ಸುಶೀಲಾ ಸಿಕ್ವೇರಾ ಯು.ಎಫ್. ಎಸ್., ಬೆಳ್ತಂಗಡಿ ವಲಯದ ವಿಗಾರ್ ಜನರಲ್ ವಂ| ಬೊನವೆಂಚರ್ ನಜ್ರೆತ್, ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ. ವಸಂತ ಬಂಗೇರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

