Chaita-Kundapura

ಕೊಪ್ಪಳ: ಈ ಬಾರಿ ಗಂಗಾವತಿಯಲ್ಲಿ ನಡೆಯುವ ಚುನಾವಣೆ ರಾಮ ಮತ್ತು ಅಲ್ಲಾನ ನಡುವೆ ಯುದ್ಧವಾಗಿದ್ದು, ಇಲ್ಲಿ ರಾಮನೇ ಗೆಲ್ಲೋದು ಎಂದು ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗಂಗಾವತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದೂ ರಕ್ತ ಹರಿಯುವ ಯಾವೊಬ್ಬ ವ್ಯಕ್ತಿಯೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿಗೆ ವೋಟ್ ಹಾಕುವುದಿಲ್ಲ. ಇಕ್ಬಾಲ್ ಅನ್ಸಾರಿ ಅವರು ಹಿಂದೂ ಸಮಾಜಕ್ಕೆ ಹೆದರಿದ್ದಾರೆ. ಯಾರ ಮೈಯಲ್ಲಿ ರಕ್ತ ಹರಿಯುತ್ತದೆಯೋ ಅವರು ಯಾರು ನಿಮಗೆ ಮತ ಹಾಕುವುದಿಲ್ಲ ಎಂದು ಕಿಡಿಕಾರಿದ್ದಾರೆ.

ದೀಪ ನಂದಿ ಹೋಗುವ ಮುನ್ನ ಬಹಳ ಉರಿಯುತ್ತದೆ. ಇದೀಗ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಪರಿಸ್ಥಿತಿಯೂ ಹಾಗೆ ಆಗಿದೆ ಎಂದು ಅನ್ಸಾರಿ ವಿರುದ್ಧ ವಾಗ್ದಾಳಿ ನಡೆಸಿದರು.

By suddi9

Leave a Reply

Your email address will not be published. Required fields are marked *