WhatsApp Image 2018-04-20 at 5.45.21 PM (1)

ಗುರುಪುರ-ಕೈಕಂಬ: ಕುಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದನ್ನು ಖಂಡಿಸಿ ಎಸ್ಕೆಸ್ಸೆಸೆಫ್ ಕೈಕಂಬ ವಲಯ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿನ ಮುಖ್ಯ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಎಸ್ಕೆಸ್ಸೆಸೆಫ್ ದ.ಕ.ಜಿಲ್ಲಾ ಟ್ರೆಂಡ್ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಮಾತನಾಡಿ, ಕುಥುವಾದ ಬಾಲಕಿಗೆ ನಡೆದ ಹೀನಾಯ ಘಟನೆಯಿಂದ ವೈಶಿಷ್ಟ, ಪಾವಿತ್ರ್ಯತೆ ಹೊಂದಿರುವ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಥುವಾ ಪ್ರಕರಣದಿಂದ ದೇಶಕ್ಕೆ ಅಪಮಾನವಾಗಿದ್ದು, ಆದ್ದರಿಂದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಈ ಪ್ರಕರಣವನ್ನು ಸಮರ್ಥಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ ಕೇರಳ ಮೂಲದ ವಿಷ್ಣು ನಂದಕುಮಾರ್ ಎಂಬಾತನನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್ಕೆಸ್ಸೆಸೆ ದ.ಕ.ಜಿಲ್ಲಾ ಕಾರ್ಯದರ್ಶಿ ಎಂ.ಎ.ಮೊಹಮ್ಮದ್ ಕುಂಞಿ, ಕೈಕಂಬ ವಲಯಾಧ್ಯಕ್ಷ ಜಮಾಲುದ್ದೀನ್ ದಾರಿಮಿ, ಕಾರ್ಯದರ್ಶಿ ಆರೀಫ್ ಕಮ್ಮಾಜೆ ಹಾಗೂ ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.

WhatsApp Image 2018-04-20 at 5.45.21 PM (3)

WhatsApp Image 2018-04-20 at 5.45.21 PM (3)

WhatsApp Image 2018-04-20 at 7.23.44 PM

By Suddi9

Leave a Reply

Your email address will not be published. Required fields are marked *