salman_650x400_41522904392

ಜೋಧಪುರ (ರಾಜಸ್ತಾನ): ತೀವೃ ಕುತೂಹಲ ಕೆರಳಿಸಿದ್ದ ಕೃಷ್ಣ ಮೃಗ ಬೇಟೆ ಪ್ರಕರಣದ ತೀರ್ಪು ಕೊನೆಗೂ ಹೊರಬಿದ್ದಿದ್ದು, ಬಾಲಿವುಡ್ ನಟ ಸಲ್ಮಾನ  ಖಾನ್ ಗೆ ನ್ಯಾಯಾಲಯ    ಎರಡು ವರ್ಷ ಶಿಕ್ಷೆ , 50 ಸಾವಿರ ರೂ. ದಂಡ ವಿಧಿಸಿದೆ.

ಪ್ರಕರಣ 20 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಜೋಧಪುರ ನ್ಯಾಯಾಲಯದ ನ್ಯಾಯಾಧೀಶ ದೇವಕುಮಾರ್ ಖತ್ರಿ,  ಸಲ್ಮಾನ್ ಗೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 9/51 ರಡಿ  2 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.

ತೀರ್ಪು ಪ್ರಕಟವಾಗಿದ್ದರೂ ಮೇಲ್ಮನವಿ ಸಲ್ಲಿಸಲು  ನ್ಯಾಯಾಧೀಶರು ಅವಕಾಶ ಕಲ್ಪಿಸಿರುವುದರಿಂದ ಸಲ್ಮಾನ್ ಈಗಲೇ ಜೈಲಿಗೆ ಹೋಗುವ  ಅಗತ್ಯವಿಲ್ಲ. ಸ್ಯೂರಿಟಿ ಪಡೆದು ಕೋರ್ಟ್ ಜಾಮೀನು ನೀಡಲಿದೆ.

ಚಿತ್ರೋದ್ಯಮ ಹಾಗೂ ಸಲ್ಮಾನ ಖಾನ್ ಅಭಿಮಾನಿಗಳು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು.

ಹಮ್ ಸಾಥ್ ಸಾಥ್ ಹೈ ಚಿತ್ರದ ಶೂಟಿಂಗ್ ವೇಳೆ ನಡೆದ ಬೇಟೆ ಪ್ರಕರಣದಲ್ಲಿ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ,  ನೀಲಂ ಕೊಠಾರಿ ಕೂಡ  ಆರೋಪಿಗಳಾಗಿದ್ದರು.

ಚಿತ್ರೀಕರಣಕ್ಕೆಂದು ರಾಜಸ್ತಾನದಲ್ಲಿ ತಂಗಿದ್ದ ಸಲ್ಮಾನ ಖಾನ್ ಹಾಗೂ ಇತರೆ ಆರೋಪಿಗಳು 1998 ರ 1 ಮತ್ತು 2 ರ ನಡುವಣ ರಾತ್ರಿ ಜೋಧಪುರ ಬಳಿಯ ಕಂಕಣಿ ಗ್ರಾಮದಲ್ಲಿ ಜಿಪ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ  ಅವರ ಕಣ್ಣಿಗೆ ಕೃಷ್ಣ  ಮೃಗಗಳ ಹಿಂಡು ಕಾಣಿಸಿತ್ತು. ಚಾಲಕನ ಸೀಟಿನಲ್ಲಿ ಕುಳಿತಿದ್ದ ಸಲ್ಮಾನಖಾನ್  ಆ  ಹಿಂಡಿನತ್ತ ಗುಂಡು ಹಾರಿಸಿದಾಗ 2 ಕೃಷ್ಣ ಮೃಗಗಳು ಮತಪಟ್ಟಿದ್ದವು. ಇದನ್ನು ಸಾರ್ವಜನಿಕರು ಗಮನಿಸಿ ಬೆನ್ನಟ್ಟಿದಾಗ ಮೃತ ಕೃಷ್ಣಮೃಗಗಳನ್ನು ಅಲ್ಲಿಯೇ ಬಿಟ್ಟು ಸಲ್ಮಾನ್ ಮತ್ತು ತಂಡ  ಅಲ್ಲಿಂದ ಪರಾರಿಯಾಗಿದ್ದರು  ಎಂದು ಸರಕಾರಿ ಅಭಿಯೋಜಕರು ವಾದಿಸಿದ್ದರು.

ಚಿಂಕಾರಾ ಬೇಟಿ ಪ್ರಕರಣದಲ್ಲಿಯೂ ಸಲ್ಮಾನ್  ದೋಷಿ ಎಂದು ಸಾಬೀತಾಗಿ ಐದು ವರ್ಷ ಶಿಕ್ಷೆಯಾಗಿತ್ತು. ಆದರೆ, ರಾಜಸ್ತಾನ ಹೈಕೋರಟ್ ಸಲ್ಮಾನ ರನ್ನು ಖುಲಾಸೆಗೊಳಿಸಿತ್ತುಇದರ ವಿರುದ್ಧ ರಾಜ್ಯ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಹಂತದಲ್ಲಿದೆ.

 

By suddi9

Leave a Reply

Your email address will not be published. Required fields are marked *