te-300x169

ನಲ್ಗೊಂಡ: ಟ್ರ್ಯಾಕ್ಟರೊಂದು ಕಾಲುವೆಗೆ ಉರುಳಿ ಬಿದ್ದ  ಪರಿಣಾಮ 9 ಕೂಲಿ ಕಾರ್ಮಿಕ ಮಹಿಳೆಯರು ನೀರುಪಾಲಾದ ಶೋಚನೀಯ ಘಟನೆ ತೆಲಾಂಗಾಣದ ನಲ್ಲೊಂಡ ಜಿಲ್ಲೆಯ ಪೆದ್ದಿಪೆಟ್ಲ  ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಮೃತ ಮಹಿಳೆಯರನ್ನು  ಪೆದ್ದಪಟ್ಲ ತಾಂಡಾದ ನಿವಾಸಿಗಳೆಂದು ಗುರುತಿಸಲಾಗಿದೆ.

ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್  ಕಾಲುವೆಗೆ ಉರುಳಿ ಬಿದ್ದು  ಈ ದುರ್ಘಟನೆ ಸಂಭವಿಸಿದ್ದು, ಟ್ರ್ಯಾಕ್ಟರ್ ನಲ್ಲಿ 30 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದರು.  ಚಾಲಕ ನಿಯಂತ್ರಣ ತಪ್ಪಿ ಎಎಂ ಆರ್ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 9 ಮಹಿಳೆಯರು ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ವಾಹನ ಚಾಲನೆ ಮಾಡುವಾಗ ಚಾಲಕ ಫೋನಿನಲ್ಲಿ ಮಾತನಾಡುತ್ತಿದ್ದ ಈ ವೇಳೆ ನಿಯಂತ್ರಣ ತಪ್ಪಿ ಕಾಲುವೆಗೆ ಟ್ರ್ಯಾಕ್ಟರ್ ಉರಳಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳೀಯರೊಂದಿಗೆ  ರಕ್ಷಣಾ ಕಾರ್ಯಾಚಾರಣೆ ನಡೆಸಿದ್ದಾರೆ.   ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

By suddi9

Leave a Reply

Your email address will not be published. Required fields are marked *