cwg-mirabhai-696x394

ಗೋಲ್ಡ್ ಕೋಸ್ಟ್: ಆಸ್ಲೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದ ಮೊದಲ ದಿನವೇ ಭಾರತದ ಪದಕ ಬೇಟೆ ಆರಂಭವಾಗಿದ್ದು, ಅತ್ತ ಪುರುಷರ ವೇಟ್ ಲಿಫ್ಟಿಂಗ್ ನಲ್ಲಿ ಗುರುರಾಜ ಬೆಳ್ಳಿ ಪದಕ ಗೆದ್ದರೆ ಇತ್ತ ಮಹಿಳೆಯರ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ದೇಶಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.
ಮಹಿಳೆಯರ 48 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಮೀರಾಬಾಯಿ ಚಾನು ಒಟ್ಟು 196 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 23 ವರ್ಷದ ಮೀರಾಬಾಯಿ ಚಾನು ಅಂತಿಮ ಸ್ಪರ್ಧೆಯಲ್ಲಿ ಕ್ರಮವಾಗಿ 80 ಕೆಜಿ, 84 ಕೆಜಿ ಮತ್ತು 86 ಕೆಜಿ  ತೂಕ ಎತ್ತುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕ ಗೆದ್ದು, ದಾಖಲೆ ನಿರ್ಮಿಸಿದ್ದಾರೆ.
ಇದು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ.

By suddi9

Leave a Reply

Your email address will not be published. Required fields are marked *