ಬುರೈದಾ : ಸೌದಿ ಅರೇಬಿಯಾದ ರಿಯಾದ್ ನಲ್ಲಿ ಇತ್ತೀಚೆಗೆ ನಡೆದ ಅಡ್ಡೂರಿಯನ್ಸ್ ಮೀಟ್ ಕಾರ್ಯಕ್ರಮ, ಅಡ್ಡೂರು ಸೆಂಟ್ರೆಲ್ ಕಮಿಟಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಮಹಾಸಭೆಯಲ್ಲಿ ಕಮಿಟಿಯ ನೂತನ ಅಧ್ಯಕ್ಷರಾಗಿ ಮರು ಆಯ್ಕೆಗೊಂಡ ಎಂ.ಮೊಹಮ್ಮದ್ ಶರೀಫ್ ಅವರಿಗೆ ಅಡ್ಡೂರು ಸೆಂಟ್ರೆಲ್ ಕಮಿಟಿಯ ಬುರೈದಾ ಘಟಕ ಅಭಿನಂದನೆ ಸಲ್ಲಿಸಿದೆ.
ಶರೀಫ್ ಅವರು ಮುಂದೆಯೂ ಸಮಾಜಿಕ ಹಾಗೂ ಧಾರ್ಮಿಕ ಸೇವೆ ಸಲ್ಲಿಸಲಿ ಎಂದು ಬುರೈದಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟನೆಯಲ್ಲಿ ಆಶಿಸಿದ್ದಾರೆ.

