ಬಂಟ್ವಾಳ : ನೂರುಲ್ ಹುದಾ ಯಂಗ್ಮೆನ್ಸ್ ಎಸೋಸಿಯೇಶನ್ ನೆಹರುನಗರ-ಪಾಣೆಮಂಗಳೂರು ಇದರ ವತಿಯಿಂದ ಇಲ್ಲಿನ ಅಲ್-ಬದ್ರಿಯಾ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಕಾರ್ಯಕ್ರಮ ಉದ್ಘಾಟಿಸಿದರು.

21 Aug Neharu Nagara

 

ನೆಹರುನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಸೀದಿ ಗೌರವಾಧ್ಯಕ್ಷ ಪಿ.ಎಂ. ಇಬ್ರಾಹಿಂ, ಕೋಶಾಧಿಕಾರಿ ಹಸನಬ್ಬ, ನೂರುಲ್ ಹುದಾ ಯಂಗ್ಮೆನ್ಸ್ ಅಧ್ಯಕ್ಷ ಎನ್. ಅಬ್ಬಾಸ್, ಮದ್ರಸ ಮುಖ್ಯ ಶಿಕ್ಷಕ ಫಕ್ರುದ್ದೀನ್ ದಾರಿಮಿ ಉಪಸ್ಥಿತರಿದ್ದರು. ಮದ್ರಸದ ಸುಮಾರು 150 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

By Suddi9

Leave a Reply

Your email address will not be published. Required fields are marked *