ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ-ಇರ್ವತ್ತೂರು ವಲಯ ಬಿಜೆಪಿ ಕಾರ್ಯಾಲಯವನ್ನು ಬಿಜೆಪಿ ಮುಖಂಡ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ಉಪಾಧ್ಯಕ್ಷ ವಿಜಯ ರೈ ಆಲದಪದವು, ಜಿಲ್ಲಾ ಪಂಚಾಯತ್ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲೂಕು ಪಂಚಾಯತ್ ಸದಸ್ಯ ರಮೇಶ ಕುಡ್ಮೇರು, ಯುವಮೋರ್ಚ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಉಪಾಧ್ಯಕ್ಷ ರಂಜಿತ್ ಮೈರ, ಕಾರ್ಯದರ್ಶಿ ಸಂತೋಷ್ ಕುಮಾರ್ ಬೆಟ್ಟು, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಕುಮಂಗಿಲ, ಸುಜಾತಾ ಪ್ರಕಾಶ ಮತ್ತಿತರರು ಇದ್ದರು.

