flipkart

ಬೆಳಗಾವಿ: ಫ್ಲಿಪ್ ಕಾರ್ಟ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರಿಗೆ  ಹಣ ಪಡೆದು ಪಂಗನಾಮ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.

ಕುಡಚಿ ಪಟ್ಟಣದ ವರ್ಧಮಾನ್ ಬಾಲೋಜೆ ಎಂಬುವವರು ಮೋಸ ಹೋದವರು.  ಕಳೆದ ವಾರ ಫ್ಲಿಪ್ ಕಾರ್ಟ್ ನಲ್ಲಿ ಮುಂಗಡವಾಗಿ 11 ಸಾವಿರ ಹಣ ಪಾವತಿಸಿ  ಲೆನೋವೋ ಮೊಬೈಲ್ ಆರ್ಡರ್ ಮಾಡಿದ್ದರು.  ಫ್ಲಿಪ್ ಕಾರ್ಟ್ ಸಿಬ್ಬಂದಿ ಆರ್ಡರ್ ತಂದು ಕೊಟ್ಟಿದ್ದು, ಹೊಸ ಮೊಬೈಲ್ ಬಂದಿರೋ ಖುಷಿಯಲ್ಲಿರುವ ವರ್ಧಮಾನ ಬಾಕ್ಸ್ ತೆರೆದು ನೋಡಿದಾಗ ಖಾಲಿ ಡಬ್ಬಾ ಮಾತ್ರ ಇದ್ದದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.

ಈ ಹಿಂದೆಯೂ ನನಗೆ ಇಂತದ್ದೇ ವಂಚನೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾನು ಬಾಕ್ಸ್ ತೆರೆಯುವಾಗ ವೀಡಿಯೊ ಮಾಡಿಕೊಂಡಿದ್ದೇನೆ. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರ್ಧಮಾನ್ ಕೂಡ ಫ್ಲಿಪ್ ಕಾರ್ಟ್ ಕಂಪನಿ ವಿರುದ್ದ ದೂರು ನೀಡಿದ್ದಾರೆ.

ಸಮಯದ ಅಭಾವ, ಕಡಿಮೆ ಬೆಲೆ ಹಾಗೂ ಕ್ವಾಲಿಟಿ ಪ್ರಾಡಕ್ಟ್ ಗಾಗಿ ಜನರು ಆನ್ ಲೈನ್ ಕಂಪನಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇತ್ತೀಚಿಗೆ ಆನ್ ಲೈನ್ ನಲ್ಲಿ ಯಾವುದಾರು ಒಂದು ವಸ್ತುವನ್ನು ಖರೀದಿಸುವ ಮುನ್ನ ಸಾವಿರ ಬಾರಿ ಯೋಚಿಸಿ ಖರೀದಿ ಮಾಡುವ ಪ್ರಸಂಗ ಎದುರಾಗಿದೆ.

By suddi9

Leave a Reply

Your email address will not be published. Required fields are marked *