ಮೈಸೂರು: ಇಂದಿನಿಂದಲೇ, ಇಲ್ಲಿಂದಲೇ ರಾಜಕೀಯ ಅಖಾಡ ಶುರುವಾಗಲಿ ನೀವಾ, ನಾವಾ ನೋಡೋಣ ಬನ್ನಿ ಎಂದು ಮಾಜಿ ಪ್ರಧಾನಿ ದೇವೇಗೌಡ ಸಿಎಂ ಸಿದ್ದರಾಮಯ್ಯರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಮೈಸೂರಿನ ಕೆ.ಜಿ. ಕೊಪ್ಪಲಿನಲ್ಲಿ ಗುರುವವಾರ ಗರಡಿ ಮನೆ ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡರಿಗೆ 85 ವರ್ಷ ವಯಸ್ಸಾಗಿದೆ. ಅವರ ಕೈಯಲ್ಲಿ ಏನೂ ಆಗಲ್ಲ ಅಂದಕೊಂಡಿದ್ದರೆ ಅದು ತಪ್ಪು. ಸಿದ್ದರಾಮಯ್ಯ ಹಾಸನದಲ್ಲಿ ವೀರಾವೇಷದಿಂದ ಭಾಷಣ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುವುದು ತುಂಬಾ ಇದೆ. ಎಲ್ಲದಕ್ಕೂ ಉತ್ತರ ನೀಡಲಿದ್ದೇನೆ ಎಂದರು.
ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಪೈಲ್ವಾನರಿಗೆ ಮಾಸಾಶನ: ಇನ್ನೂ ಕಾರ್ಯಕ್ರಮದಲ್ಲಿ ಪೈಲ್ವಾನರಿಗೆ ಮಾಸಾಶನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೈಲ್ವಾನರಿಗೆ ಮಾಸಾಶನ ನೀಡುವ ಕುರಿತು ಈ ಹಿಂದೇ ಚಿಂತನೆ ನಡೆಸಲಾಗಿತ್ತಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಮಾಸಾಶನೆ ಕೊಡಿಸುತ್ತೇನೆ ಎಂದು ಹೇಳಿದರು.

