ಹೊಸದಿಲ್ಲಿ: ಹೈದರ್ ಖ್ಯಾತಿಯ ಬಾಲಿವುಡ್ ನಟ ನರೇಂದ್ರ ಝಾ (55) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಝಾ ಅವರಿಗೆ ಮೂರನೇ ಬಾರಿ ಹೃದಯಾಘಾತವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರದ ಮಧುಬಾನಿಯಲ್ಲಿ ಜನಿಸಿದ್ದ ಝಾ, ಬಾಲಿವುಡ್ ಮತ್ತು ಕಿರುತೆರೆ ನಟನೆಯಲ್ಲಿ ಹೆಸರು ಮಾಡಿದ್ದರು.
ಹೃತಿಕ್ ರೋಷನ್ ಅವರ “ಕಾಬಿಲ್ ‘, ಶಾರುಖ್ ಖಾನ್ ಅವರ “ರಾಯೀಸ್ ‘, ಶಾಹೀದ್ ಕಪೂರ್ ಅವರ “ಹೈದರ್ ‘ ಮೊದಲಾದ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳesಲ್ಲಿ ನಟಿಸಿದ್ದರು.

