
ಬಲ್ಲಿಯಾ: ಸಾಲ ವಸೂಲಾತಿಗಾಗಿ ದಲಿತ ಮಹಿಳೆಯೋರ್ವರನ್ನು ದುಷ್ಕರ್ಮಿಗಳು ಸಜೀವ ದಹನ ಮಾಡಲು ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಜಜೌಲಿ ಗ್ರಾಮದಲ್ಲಿ ನಡೆದಿದೆ.
45 ವರ್ಷದ ದಲಿತ ಮಹಿಳೆಯನ್ನು ರೇಷ್ಮಾ ದೇವಿ ಎಂದು ಗುರುತಿಸಲಾಗಿದೆ.
ರೇಷ್ಮಾ ದೇವಿ ಅವರು ತನ್ನ ಮನೆಯಲ್ಲಿ ಮಲಗಿದ್ದಾಗ 20,000 ರೂ.ಸಾಲ ವಸೂಲಾತಿಗೆ ಬಂದ ದುಷ್ಕರ್ಮಿಗಳು ಸೀಮೆ ಎಣ್ಣೆ ಸುರಿದು ಸಜೀವ ದಹನ ಮಾಡಲು ಮುಂದಾಗಿ ಪರಾರಿಯಾಗಿದ್ದಾರೆ. ಘಟನೆಯಿಂದ ತೀವ್ರಗಾಯಗೊಂಡ ರೇಷ್ಮಾ ದೇವಿ ಅವರು ಸ್ಥಳೀಯ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧ ಆರೋಪಿಗಳಾದ ಸೋನು ಮತ್ತು ಸಿದ್ಧು ಸಿಂಗ್ ಎಂಬವನನ್ನು ಬಂಧಿಸಲಾಗಿದೆ. ಮಹಿಳೆ ಆರೋಪಿಗಳಿಂದ ಸಾಲ ಪಡೆದಿದ್ದರು. 20,000 ರೂ.ಗಳನ್ನು ಮರು ಪಾವತಿಸಿದ ನಂತರವು ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
