Related image

ಅಗರ್ತಲಾ (ತ್ರಿಪುರಾ): ತ್ರಿಪುರಾದಲ್ಲಿ ಭಾರತೀಯ ಜನತಾಪಕ್ಷದ ಗೆಲುವು ಐತಿಹಾಸಿಕ  ಎಂದು ಶುಕ್ರವಾರ ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪಕ್ಷ  ಈಗ  ಈ ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಸಮೃದ್ಧಿಯ ದೀಪ ಬೆಳಗಿಸಿದೆ ಎಂದು ಹೇಳಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ಡೆಬ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ತ್ರಿಪುರಾಕ್ಕೆ ಇಂದು ಐತಿಹಾಸಿಕ ದಿನ. ರಾಜ್ಯದಲ್ಲಿ ಇಂದು ದೀಪಾವಳಿ ಆಚರಿಸಿದ ಸಂಭ್ರಮ ಕಾಣುತ್ತಿದೆ.  ನಾವಿಂದು ಇಲ್ಲಿ ಅಭಿವೃದ್ಧಿ ಹಾಗೂ ಸಮೃದ್ಧಿಯ ದೀಪ ಬೆಳಗಿಸುತ್ತಿದ್ದೇವೆ. ಇಲ್ಲಿ ಈಗ ಹೊಸ   ಉತ್ಸಾಹ  ಉಕ್ಕಿ ಹರಿಯುತ್ತಿದೆ ಎಂದು ಹೇಳಿದರು.

ಭಾರತದ  ಇತಿಹಾಸದಲ್ಲಿ ಕೆಲವು ಚುನಾವಣೆಗಳು ಚರ್ಚೆಗೆ ಒಳಗಾಗುತ್ತವೆ. 2018 ರ ತ್ರಿಪುರಾ ಚುನಾವಣೆ  ಇದಕ್ಕೆ ತಾಜಾ ಉದಾಹರಣೆ. ಈ ಚುನಾವಣೆಯ ಬಗ್ಗೆ ಜನ ಚರ್ಚೆ ಮುಂದುವರಿಸುತ್ತಾಋಏ  ಎಂದರು.

ಭಾರತೀಯ ಜನತಾಪಕ್ಷವು ಜನಸ್ನೇಹಿ ಎಂದು ಬಣ್ಣಿಸಿದ ಪ್ರಧಾನಿ, ರಾಜ್ದದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ತ್ರಿಪುರಾದಲ್ಲಿ ಸದ್ಯ ಪ್ರತಿಪಕ್ಷದಲ್ಲಿರುವವರು ತುಂಬಾ ದಿನ  ಅಧಿಕಾರದಲ್ಲಿದ್ದವರು. ಅವರಿಗೆ ಸಾಕಷ್ಟು ಅನುಭವ  ಇದೆ. ನಮ್ಮ ತಂಡ ವಯಸ್ಸಿನಲ್ಲೂ, ಅನುಭವದಲ್ಲಿಯೂ ಇನ್ನೂ ಚಿಕ್ಕದು ಎಂದು ಮೋದಿ ಹೇಳಿದರು.

ಅವರಿಗೆಲ್ಲ  ಅನುಭವ ಇದೆ. ನಮ್ಮವರಿಗೆ ಉತ್ಸಾಹ, ಮಹತ್ವಾಕಾಂಕ್ಷೆ ಇದೆ. ತ್ರಿಪುರಾದ   ಏಳ್ಗೆಗೆ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ತ್ರಿಪರಾದ ನೂತನ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ ಅವರು, ತ್ರಿಪುರಾದ ಕನಸುಗಳು ಬಿಜೆಪಿಯ ಕನಸುಗಳೂ ಹೌದು ಎಂದರು.ಹಿರಿಯ ಬಿಜೆಪಿ ಮುಖಂಡರಾದ  ಎಲ್ . ಕೆ ಅಡ್ವಾಣಿ, ಮುರಳಿಮನೋಹರ ಜೋಶಿ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 

By Suddi9

Leave a Reply

Your email address will not be published. Required fields are marked *