
ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಭಯ್ಯಾಜಿ ಜೋಷಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಸುರೇಶ್ ಭಯ್ಯಾಜಿ ಅವರು 2009ರಿಂದ ಸಹ ಕಾರ್ಯವಾಹರಾಗಿರುವ ಸೇವೆಸಲ್ಲಿಸುತ್ತಿದ್ದರು.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಒಳಗೊಂಡ ಆರೆಸ್ಸೆಸ್ ದಕ್ಷಿಣ-ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾಗಿ (ಅಧ್ಯಕ್ಷ) ವಿ.ನಾಗರಾಜ್ ಸಹ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
