
ಮಂಗಳೂರು: ಅಧಿಕಾರದ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಹಾಡಿನ ಮೂಲಕ ಹೊರಹಾಕುವ ಭರದಲ್ಲಿ ಶಾಸಕ ಮೊಯ್ದೀನ್ ಬಾವಾ ಎಡವಟ್ಟು ಮಾಡಿಕೊಂಡಿದ್ದು, ಇದರಿಂದ ಕೆಲ ಹಿಂದೂ ಸಂಘಟನೆಗಳ ಕಂಗೆಣ್ಣಿಗೆ ಮತ್ತೊಮ್ಮೆ ಗುರಿಯಾಗಿದ್ದಾರೆ.
ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಶಾಸಕ ಬಾವಾ ಅವರು ಕ್ಷೇತ್ರದ ಕಡೆಗಳಲ್ಲಿ ಬಂದಾಗ ಹಾಡಿನ ಮೂಲಕ ಪ್ರಚಾರ ನಡೆಸುತ್ತಿದ್ದರು. ಈ ಭರದಲ್ಲಿ ಹಿಂದೂಗಳ ಪವಿತ್ರ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿಯ ಗೀತೆಯೊಂದನ್ನು ಬಳಸಿ ವಿರೂಪ ಮಾಡಿ ತುಳು ಸಾಹಿತ್ಯ ರಚಿಸಿದ್ದಾರೆ ಎಂದು ಗಂಭೀರ ಆರೋಪವೊಂದು ಸಾರ್ವಜನಿಕರಲ್ಲಿ ಕೇಳಿ ಬಂದಿದೆ.
“ಕಲ್ಲು ಮುಳ್ಳು ಪಾದಕ್ಕೆ ಹೂವು” ಎನ್ನುವ ಅಯ್ಯಪ್” ಸ್ವಾಮಿಯ ಪ್ರಸಿದ್ಧ ಗೀತೆಯೊಂದರ ಸಂಗೀತವನ್ನು ತುಳು ಸಾಹಿತ್ಯದ ಮೂಲಕ ಗೀತೆ ರಚಿಸಿ ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿರುವುದು ಹಿಂದೂ ಮುಖಂಡರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಈ ಹಾಡು ಸಾಮಾಜಿಕತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇದರಿಂದ ಆಕ್ರೋಶಗೊಂಡಿರುವ ಕೆಲ ಹಿಂದೂಗಳು ಅಯ್ಯಪ್ಪ ಸ್ವಾಮಿಗೆ ಅವಹೇಳನ ಮಾಡಲಾಗಿದೆ ಎಂದು ಬಾವಾ ವಿರುದ್ಧ ಆಕ್ರೋಶ ಭರಿತ ಬರಹ ಗೀಚಿದ್ದಾರೆ.
