Image result for airtel bank

ಭಾರತೀಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಏರ್ಟೆಲ್, ಜಿಯೋ ಹಿಂದಿಕ್ಕುವ ಭರದಲ್ಲಿ ಪೇಮೆಂಟ್ ಬ್ಯಾಂಕ್ ಆರಂಭಿಸಿದ ನಂತರದಿಂದ ಒಂದಲ್ಲ ಒಂದು ತಪ್ಪುಗಳನ್ನು ಮಾಡುತ್ತಿದೆ. ಈ ಹಿಂದೆ ಆಧಾರ್ ಜೋಡನೆ ಸಂದರ್ಭದಲ್ಲಿ ಅಕ್ರಮವೆಸಗಿ ಗ್ರಾಹಕರಿಗೆ ತೊಂದರೆಯನ್ನು ನೀಡಿದ್ದ ಏರ್ಟೆಲ್ ಪೇಮೆಂಟ್ ಬ್ಯಾಂಕ್, ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸಿ RBI ಕೆಂಗಣ್ಣಿಗೆ ಗುರಿಯಾಗಿದೆ.

ಮೂಲಕ ಏರ್ಟೆಲ್ ಪೇಮೆಂಟ್ ಬ್ಯಾಂಕ್ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ದೊಡ್ಡ ಮೊತ್ತದ ದಂಡ ಪಾವತಿಯ ಶಿಕ್ಷೆಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಕಾರ್ಯಾಚರಣೆ ಮಾರ್ಗಸೂಚಿಗಳು ಮತ್ತು ಕೆವೈಸಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ಗೆ ಆರ್ಬಿಐ 5 ಕೋಟಿ ರೂ. ದಂಡ ವಿಧಿಸಿದೆ.

ಕಾರಣವೇನು?: ಈ ಹಿಂದೆ ಏರ್ಟೆಲ್ ಸಿಮ್ ಕಾರ್ಡ್ನೊಂದಿಗೆ ಆಧಾರ್ ಜೋಡನೆ ಮಾಡಲು ಬಂದ ಗ್ರಾಹಕರ ಒಪ್ಪಿಗೆ ಇಲ್ಲದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ನಲ್ಲಿ ಖಾತೆ ತೆರೆಯಲಾಗಿದೆ. ಇದು ಗ್ರಾಹಕರ ಕೆವೈಸಿ ನಿಯಮಗಳನ್ನು ಉಲ್ಲಂಘಿಸಿರುವುದಾಗಿದ್ದು, ಈ ಕುರಿತು ದೂರು ದಾಖಲಾಗಿತ್ತು. ಈ ಬಗ್ಗೆ ಆರ್ಬಿಐ ವಿಚಾರಣೆ ನಡೆಸಿ ದಂಡ ಹಾಕಿದೆ.

ಸರಕಾರದ ಸಬ್ಸಿಡಿ:ಗ್ರಾಹರ ಅರಿವಿಗೆ ಬಾರದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ನಲ್ಲಿ ಖಾತೆ ತೆರೆದಿದ್ದ ಏರ್ಟೆಲ್, ಗ್ರಾಹಕರ ಕೆವೈಸಿಯನ್ನು ಪಡೆದುಕೊಂಡಿತ್ತು. ಇದರಿಂದಾಗಿ ಸರಕಾರದಿಂದ ನೇರಾವಾಗಿ ವರ್ಗಾವಣೆಯಾಗುವ ಸಬ್ಸಿಡಿ ಹಣವು ಏರ್ಟೆಲ್ ಪೇಮೆಂಟ್ ಬ್ಯಾಂಕಿಗೆ ಹರಿದು ಬಂದಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಸಹ ಆಗಿತ್ತು.

RBI ವಿಚಾರಣೆ: ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ RBI, ಗ್ರಾಹಕರ ಕೆವೈಸಿ ಪಡೆದುಕೊಳ್ಳುವ ವಿಚಾರದಲ್ಲಿ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಅಕ್ರಮವೆಸಗಿರುವುದು ಸಾಭೀತಾದಹಿನ್ನೆಲೆಯಲ್ಲಿ ಈ ದೊಡ್ಡ ಮಟ್ಟದ ದಂಡವನ್ನು ವಿಧಿಸಿದೆ.

23 ಲಕ್ಷ ಗ್ರಾಹಕರು: ಕಳೆದ ವರ್ಷದ ಜನವರಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿ ಏರ್ಟೆಲ್ ಪೇಮೆಂಟ್ ಬ್ಯಾಂಕ್ 23 ಲಕ್ಷ ಗ್ರಾಹಕರನ್ನು ಹೊಂದಿದೆ. ಆದರೆ ಇದರಲ್ಲಿ ಎಷ್ಟೋ ಗ್ರಾಹಕರಿಗೆ ತಮ್ಮ ಖಾತೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ನಲ್ಲಿದೆ ಎಂಬುದೆ ತಿಳಿದಿಲ್ಲ ಎನ್ನಲಾಗಿದೆ.

 

By suddi9

Leave a Reply

Your email address will not be published. Required fields are marked *