ಕಾಸರಗೋಡು: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಯನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಿಜೆಪಿ ಕಾರ್ಯಕರ್ತ ದಿನೇಶ್ ( 42) ಎಂದು ಗುರುತಿಸಲಾಗಿದೆ.
ಏನಿದು ಘಟನೆ: ಇಲ್ಲಿನ ತಳಿಪರಂಬದ ತಾಲ್ಲೂಕು ಕಚೇರಿ ಎದುರಿನ ಗಾಂಧಿ ಪ್ರತಿಮೆ ಮೇಲೆ ಹತ್ತಿದ ಈತ ಪ್ರತಿಮೆಯ ಕನ್ನಡಕ ಮತ್ತು ಹಾರ ವನ್ನು ಕಿತ್ತೆಸೆದಿದ್ದು , ಪ್ರತಿಮೆಯನ್ನು ಭಗ್ನಗೊಳಿಸಲು ಯತ್ನಿಸಿದ್ದಾನೆ.
ದುಷ್ಕ್ರತ್ಯವನ್ನು ನಡೆಸಿದ ವ್ಯಕ್ತಿಯ ಫೋಟೋ ವನ್ನು ಅಲ್ಲಿದ್ದವರು ಕ್ಲಿಕ್ಕಿಸಿದ್ದು, ಇದನ್ನಾಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಕೃತ್ಯಕ್ಕೆ ಹಲವು ರಾಜಕೀಯ ಪಕ್ಷ ಗಳು, ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು.

