ಬೆಂಗಳೂರು: ಕನ್ನಡದ ಚಾರ್ಲಿ ಸಿನಿಮಾದ ನಿರ್ದೇಶಕ ಶಿವ ಲಿವರ್ ಡ್ಯಾಮೇಜ್ ಹಾಗೂ ಹೃದಯಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಅಂತ ತಿಳಿದು ಬಂದಿದೆ.
34 ವರ್ಷದ ಶಿವ ಮೂಲತಃ ಬೆಳಗಾವಿಯವರಾಗಿದ್ದು, ನಿರ್ದೇಶಕ ದುನಿಯಾ ಸೂರಿ ಅವರ ಜೊತೆಗೆ ತಮ್ಮ ಸಿನಿಮಾ ಕೇರಿಯರ್ ಅನ್ನು ಶುರು ಮಾಡಿದ್ದರು. ಇದಲ್ಲದೇ ನಿರ್ದೇಶಕ ಸೂರಿ ಜೊತೆ ಇಂತಿ ನಿನ್ನ ಪ್ರೀತಿಯ, ಜಾಕಿ, ಅಣ್ಣಾ ಬಾಂಡ್ ಮುಂತಾದ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇನ್ನು ಯೋಗರಾಜ್ ಭಟ್ ಮತ್ತು ಗಡ್ಡ ಸೂರಿ ಬಳಿಯೂ ಕಾರ್ಯ ನಿರ್ವಹಿಸಿದ್ದ ಶಿವು ಆವರು ನಂತರ ತಾವೇ ಚಾರ್ಲಿ ಸಿನಿಮಾವನ್ನು ನಿರ್ದೇಶಿಸಿದ್ದ ನಂತರ ಈಗ ಮಾಲ್ಗುಡಿ ಡೇಯ್ಸ್ ಅನ್ನೋ ಚಿತ್ರದ ನಿರ್ದೇಶನ ಮಾಡಲು ಮುಂದಾಗಿದ್ದರು. ಈ ನಡುವೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನವಾಗಿದ್ದಾರೆ ಅಂತ ತಿಳಿದು ಬಂದಿದೆ. ಶಿವು ಅವರು ಎರಡು ವರೆ ವರ್ಷದ ಹಿಂದೆ ಮದುವೆಯಾಗಿದ್ದರು ಅಂತ ತಿಳಿದು ಬಂದಿದೆ.

