ಬೆಂಗಳೂರು: ಸಾಫ್ಟ್ ವೇರ್ ಇಂಜಿನಿಯರೋರ್ವ ಆಯತಪ್ಪಿ 9ನೆ ಮಹಡಿಯಿಂದ ಜಾರಿಬಿದ್ದು ಮೃತಪಟ್ಟಿರುವ ಘಟನೆ ನಗರದ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಗೌತಮ್‍ಕುಮಾರ್ (28) ಮೃತಪಟ್ಟ ಟೆಕ್ಕಿ ಎಂದು ಗುರುತಿಸಲಾಗಿದೆ.
ಗೌತಮ್‍ಕುಮಾರ್ ಕಾಡಬೀಚನಹಳ್ಳಿಯ ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು,
ಇಲ್ಲಿನ ಗ್ರೀನ್‍ಲೇ ಲೇಔಟ್ ಶೋಭಾ ಡೇ ಅಪಾರ್ಟ್‍ಮೆಂಟ್‍ನ 9ನೆ ಮಹಡಿಯಲ್ಲಿ ಗೌತಮ್‍ಕುಮಾರ್ ಸೇರಿ ಸ್ನೇಹಿತರೆಲ್ಲ ರಾತ್ರಿ 11.30ರಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಗೌತಮ್‍ಕುಮಾರ್ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

