ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಫೆ.28ರಿಂದ ಮಾ.4 ಭಾನುವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.ಫೆ.28ರಂದು ಬೆಳಗ್ಗೆ 10 ಕ್ಕೆ ದೇವತಾ ಪ್ರಾರ್ಥನೆ, ನವಕ ಕಲಶ-ಪ್ರಧಾನ ಹೋಮ, ಮಧ್ಯಾಹ್ನ ಘಂಟೆ12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ಸಂಜೆ 4 ಗಂಟೆಗೆ ಕೋಳಿಕುಂಟ ಸಂಜೆ 7 ಗಂಟೆಗೆ ಭಂಡಾರದ ಮನೆಯಿಂದ ದೇವಸ್ಥಾನಕ್ಕೆ ಭಂಡಾರ ಬರುವುದು .
ರಾತ್ರಿ ಗಂಟೆ 9.ಕ್ಕೆ ಧ್ವಜಾರೋಹಣ ಉತ್ಸವ ಬಲಿ, ಕಂಚಿಲಸೇವೆ, ಸಂಜೆ 5.30ರಿಂದ ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಇದರ ಮಹಿಳಾ ಯುವ ಪ್ರತಿಭೆಗಳಿಂದ “ಯಕ್ಷಗಾನ ನಾಟ್ಯ ವೈಭವ” 6ರಿಂದ ಯಕ್ಷಕಲಾ ಸಂಘ ವರಕೋಡಿ ಯಕ್ಷಧಾಮ ಇದರ ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ “ಶಶಿಪ್ರಭಾ ಪರಿಣಯ”
ಮಾ. 1ರಂದು ರಾತ್ರಿ 9 ರಿಂದ ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಬೆಳ್ಳೂರು ಇದರ ಯುವ ಕಲಾವಿದರು ಹಾಗೂ ಮಹಿಳಾ ಕಲಾವಿದರಿಂದ ಯಕ್ಷಗಾನ ಬಯಲಾಟ “ಕೃಷ್ಣ ಲೀಲೆ-ಕಂಸವಧೆ-ಅಗ್ರಪೂಜೆ”
ಮಾ.2ರಂದು ಸಂಜೆ 6.30ರಿಂದ ಅಕ್ಷಿತ್ ದೇವಾಡಿಗ ಬೇಳ್ಳೂರು ಮತ್ತು ಬಳಗದವರಿಂದ ಸ್ಯಾಕ್ಷೋಫೋನ್ ವಾದನ ಜರುಗಲಿದೆ.ಮಾ. 3ರಂದು “ರಥೋತ್ಸವ” ಸಂಜೆ 6 ರಿಂದ ರಂಗ್ ದ ಕಲಾವಿದೆರ್ ಗುರುಪುರ ಇವರು ಪ್ರಸ್ತುತ ಪಡಿಸುವ “ಭರತನಾಟ್ಯ ವೈಭವ”
ಸಂಜೆ 7 ರಿಂದ ರಂಗ್ ದ ಕಲಾವಿದೆರ್ ಗುರುಪುರ ಇವರು ಅಭಿನಯಿಸುವ “ರಂಗ್‍ದ ತೆಲಿಕೆ ತಮ್ಮನ” ಮಾ. 4 ರಂದು ಭಾನುವಾರ ಸಂಜೆ 7 ರಿಂದ ಗಾನಭೂಷಣ ಕೆ.ಜೆ.ವೆಂಕಟ್ ಕೃಷ್ಣ ಭಟ್ ಬಿ.ಸಿ.ರೋಡು ಇವರ ಶಿಷ್ಯರಿಂದ ಬೆಳ್ಳೂರಿನ ಮಕ್ಕಳಿಂದ “ಭಕ್ತಿಗಾನ ಸುಧಾ” ರಾತ್ರಿ ಗಂಟೆ 9 ರಿಂದ ವಿಠಲನಾಯ್ಕ್ ಮತ್ತು ಬಳಗ ಕಲ್ಲಡ್ಕ ಇವರಿಂದ “ಗೀತಾ ಸಾಹಿತ್ಯ ಸಂಭ್ರಮ” ಜರುಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
