ಶಿಲ್ಲಾಂಗ್: ಮೇಘಾಲಯ ‘ರಾಜ್ಯದಲ್ಲಿ ಆಡಳಿತ ನಡೆಸಲು ನಮಗೂ ಒಂದು ಅವಕಾಶ ನೀಡಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದಂತೆ ನಾವು ಆಡಳಿತ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಫುಲ್ಬಾರಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು,
ಸರಕಾರ ಜನರನ್ನು ಕಡೆಗಣಿಸಿ ತಾವು ಆಡಿದ್ದೇ ಆಟ ಎಂದುಕೊಂಡಿದ್ದು, ರಾಜಕೀಯ ಎದುರಾಳಿಗಳಿಲ್ಲದೆ ಇರುವುದರಿಂದ ಹೀಗೆ ಆಟವಾಡುತ್ತಿವೆ ಕಿಡಿಕಾರಿದ್ದಾರೆ.
ನಾವು ‘ಆಯಕ್ಟ್ ಈಸ್ಟ್ ಪಾಲಿಸಿ’ಯನ್ನು ಮತ್ತಷ್ಟು ಬಲಗೊಳಿಸಲಿದ್ದೇವೆ. ಇದು ಸಂಪೂರ್ಣ ಈಶಾನ್ಯ ಭಾರತದಲ್ಲಿ ಬದಲಾವಣೆ ತರಲಿದೆ. ಜನರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಅವರು ವಿವರಿಸಿದರು.
‘ಮೇಘಾಲಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ ಪ್ರವಾಸಿಗರಿಲ್ಲದೆ ಈ ಕ್ಷೇತ್ರ ಸೊರಗಿದೆ. ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸರಕಾರ ಏನನ್ನೂ ಮಾಡಿಲ್ಲ. ನಾವು ಇಲ್ಲಿಗೆ ಹೆಚ್ಚಿನ ಪ್ರವಾಸಿಗರನ್ನು ಕರೆತರುವ ಭರವಸೆ ನಿಡುತ್ತೇವೆ ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಾವು 1,100 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ರೂ. 470 ಕೋಟಿ ರೂ. ಹಣ ನೀಡಿದ್ದೆವು. ಆದರೆ ಹಾಲಿ ಮೇಘಾಲಯ ಸರಕಾರಕ್ಕೆ ಇದರ ಅರ್ಧದಷ್ಟನ್ನೂ ಬಳಸಿಕೊಳ್ಳಲಾಗಿಲ್ಲ. ನಾವು 180 ಕೋಟಿ ರೂ. ವೆಚ್ಚದಲ್ಲಿ ಶಿಲ್ಲಾಂಗ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದರಿಂದ ಉದ್ಯಮ ಅಭಿವೃದ್ಧಿಯಾಗಲಿದ್ದು ಒಂದು ತಲೆಮಾರಿಗೆ ಉದ್ಯೋಗ ಸಿಗಲಿದೆ ಎಂದು ಭರವಸೆ ನೀಡಿದರು.
ಇನ್ನು ಹಾಲಿ ಮುಖ್ಯಮಂತ್ರಿ ವೈದ್ಯರಾದರೂ ರಾಜ್ಯದ ಆರೋಗ್ಯ ಕ್ಷೇತ್ರ ಪೂರ್ತಿ ಹದಗೆಟ್ಟಿದೆ. ತಾಯಂದಿರು ಮನೆಯಲ್ಲೇ ಹೆರಿಗೆಗೆ ಒಳಗಾಗುತ್ತಿದ್ದಾರೆ. ನಾವು ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.

