ಕಾರ್ಕಳ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸುವಲ್ಲಿ ಬುಧವಾರ ಯಶಸ್ವಿಯಾಗಿದ್ದಾರೆ.
ಕಾಪು ನಿವಾಸಿ ಅಝರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್ ಹಾಗೂ ಮೊಹಮ್ಮದ್ ಅಝರುದ್ದೀನ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಇಲ್ಲಿನ ಬಂಗ್ಗೆಗುಡ್ಡೆಯಲ್ಲಿ ಮನೆ ಬಾಗಿಲು ಮುರಿದು ದರೋಡೆ ನಡೆಸಿದ್ದರು. ಅಲ್ಲದೆ, ಭಟ್ಕಳ, ಕುಂದಾಪುರ, ಉಡುಪಿ ಮತ್ತು ಕಾರ್ಕಳದಲ್ಲಿ ನಡೆದ ಹಲವು ಕಳವು ಪ್ರಕರಣ, ಸರಗಳ್ಳತನಗಳಲ್ಲಿ ಇವರಿಬ್ಬರೂ ಶಾಮೀಲಾಗಿದ್ದಾರೆ. ಇದರಿಂದ ಎಚ್ಚತ್ತ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಚಿನ್ನಾಭರಣಗಳ ಸಹಿತ ಬೈಕ್ ಕೂಡಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀ

