221

ಹೊಸದಿಲ್ಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಾವೇರಿ ತೀರ್ಪು ಸುಪ್ರೀಂ ಕೋರ್ಟ್ ನಿಂದ ಇಂದು ಪ್ರಕಟವಾಗಿದ್ದು, ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡುವ ಕುರಿತು ಅನುಮೋದನೆ ನೀಡಿದೆ. ಇದರಿಂದ ರಾಜ್ಯದ ಜನತೆಯ ಕಣ್ಣು ತೆರೆದೆಂತಾಗಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾ. ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್ ರಾಯ್ ಅವರಿದ್ದ ಈ ತ್ರಿಸದಸ್ಯ ಪೀಠ ಕಾವೇರಿ ವಿವಾದಕ್ಕೆ ಅಂತಿಮ ತೀರ್ಪು ನೀಡಿದೆ.

ಕರ್ನಾಟಕ-ತಮಿಳುನಾಡಿಗೆ 177 ಟಿಎಂಸಿ ನೀರು ಹಂಚಿಕೆ ಕರ್ನಾಟಕ ನೀರಾವರಿ ಪ್ರದೇಶ ಹೆಚ್ಚುವರಿ ಮಾಡಿಕೊಳ್ಳಬಹುದು. ತಮಿಳುನಾಡಿಗೆ 177 ಟಿಎಂಸಿ ನೀರು ಬಿಡುಗಡೆ ಮಾಡಬೇಕು.

*ಕಾವೇರಿ ನಿರ್ವಹಣಾ ಮಂಡಳಿ ರಚನೆ ನಾವು ಆದೇಶ ನೀಡುವುದಿಲ್ಲ. ನಿರ್ವಹಣ ಮಂಡಳಿಯ ಸ್ಥಾಪನೆಯ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

* ಕರ್ನಾಟಕದ ಮೇಲ್ಮನವಿಗೆ ಸ್ವಲ್ಪ ಮಟ್ಟಿಗೆ ಗೆಲುವು. ಮುಂದಿನ 15 ವರ್ಷಕ್ಕೆ ಟ್ರಿಬ್ಯುನಲ್ ತೀರ್ಪು ಅನ್ವಯ
* 1924ರ ಒಪ್ಪಂದ ಸಂವಿಧಾನ ಬದ್ಧವಾಗಿದೆ ಎಂದು ತೀರ್ಪು ನೀಡಿದೆ.

 

By Suddi9

Leave a Reply

Your email address will not be published. Required fields are marked *