ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲ ಸಂಘ (ರಿ.) ಬಂಟ್ವಾಳ,  ಪ್ರಾಂಶುಪಾಲ ಸುಪ್ರಿಯಾ ಎಸ್.  ವಕೀಲರ ಸಂಘದ ಕಾರ್ಮೆಲ್ ಕಾಲೇಜು, ಮೊಡಂಕಾಪು ಪ್ರೌಢಶಾಲೆ , ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಸೊಸೈಟಿ ಇದರ ಸಂಯುಕ್ತ ಆಶ್ರಯದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕಾನೂನು ಮಾಹಿತಿ ಶಿಬಿರ ಕಾರ್ಮೆಲ್ ಕಾಲೇಜಿನಲ್ಲಿ ನಡೆಯಿತು. DSC_1138
DSC_1145
DSC_1146
ಪ್ರಭಾರ ಸಿವಿಲ್ ಜೆ.ಎಂ.ಎಪ್.ಸಿ.ಹಾಗೂ ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವೆ ಗಳ ಪ್ರಾಧಿಕಾರ    ದ ಪ್ರತಿಭಾ ಡಿ.ಎಸ್    ಕಾರ್ಯ ಕ್ರಮವನ್ನು ದೀಪ ಬೆಳಗಿಸಿಉದ್ಘಾಟಿಸಿ ಮಾತನಾಡಿ  ಪೋಲೀಸ್ ರಿಗೆ ಹೆದರಿ ಹೆಲ್ಮ್ ಟ್ ಧರಿಸಬೇಡಿ ನಿಮ್ಮ ಜೀವದ ರಕ್ಷಣೆಗಾಗಿ ಗುಣಮಟ್ಟದ ಹೆಲ್ಮೆಟ್ ಧರಿಸಿ. ನಿಮ್ಮ ಜೀವದ ರಕ್ಷಣೆ ನಿಮ್ಮ ಜವಬ್ದಾರಿ , ಜೀವದ ಬೆಲೆಯನ್ನು ಅರಿತುಕೊಂಡು ಬೈಕ್ ರೈಡ್ ಮಾಡಿ ಎಂದು  ಹೇಳಿದರು.
ಸರಕಾರ ದ ಅದೇಶಕ್ಕೆ ಅಥವಾ ಪೋಲಿಸ್ ರಿಗೆ ಹೆದರಿ ಪಾಲಿಸುವ ಮೊದಲು ನಮ್ಮ ಜೀವದ ರಕ್ಷಣೆ ಗಾಗಿ ಮಾಡಿರುವ ಕಾನೂನು ಎನ್ನುವುದನ್ನು ಅರಿತುಕೊಂಡರೆ.  ಅಮಾಕವಾಗಿ ರಸ್ತೆ ಅಪಘಾತದಲ್ಲಿ ಬಲಿಯಾಗುವುದನ್ನು ಕಡಿಮೆ ಮಾಡಬಹುದು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಬಂಟ್ವಾಳ ಟ್ರಾಫಿಕ್ ಪೋಲೀಸ್ ಉಪನಿರೀಕ್ಷಕ ಯಲ್ಲಪ್ಪ ಮಾತಮಾಡಿ ಟ್ರಾಪಿಕ್ ರೂಲ್ ಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ದ ಅದ್ಯಕ್ಷ ತೆಯನ್ನು ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲೆ ಸುಪ್ರಿಯಾ ಎಂ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಪ್.ಸಿ.ಹಾಗೂ ಅದ್ಯಕ್ಷ ರು ತಾಲೂಕು ಕಾನೂನು ಸೇವೆ ಗಳ ಪ್ರಾಧಿಕಾರ ದ ಚಂದ್ರ ಶೇಖರ, ವಕೀಲರ ಸಂಘದ ಅದ್ಯಕ್ಷ ವೆಂಕಟರಮಣ ಶೆಣೈ, ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಸ್.ಆಲಿ ಸಹಾಯಕ ಸರ್ಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ಮೊಡಕಾಂಪು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸಿ.ನವೀನಾ, ಸಂಪನ್ಮೂಲ ವ್ಯಕ್ತಿ ವಕೀಲರಾದ ಕು. ವಿದ್ಯಾಲತ, ಟ್ರಾಫಿಕ್ ಪೋಲೀಸ್ ಠಾಣೆಯ ಎ.ಎಸ್.ಐ.ಬಾಲಕ್ರಷ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *