ಬಂಟ್ವಾಳ: ಆಡಳಿತ ಪಕ್ಷದ ಸದಸ್ಯರಿಬ್ಬರ ಆಕ್ಷೇಪದ ನಡುವೆಯೇ 2018-19 ಸಾಲಿನಿಂದ ಅಂದರೆ ಮುಂದಿನ ಎಪ್ರಿಲ್ ತಿಂಗಳಿನಿಂದಲೇ ಪುರವಾಸಿಗಳಿಂದ ತ್ಯಾಜ್ಯ ಸಂಗ್ರಹಣೆಯಶುಲ್ಕವನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆಯ ಜೊತೆಯಲ್ಲೇ ವಸೂಲಾತಿಗೆ ಬುಧವಾರ ನಡೆದ ಬಂಟ್ವಾಳ ಪುರಸಬವೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಪುರಸಭಾಧ್ಯಕ್ಷರಾಮಕೃಷ್ಣ ಆಳ್ವ ಅವರು ಸಭಾಧ್ಯಕ್ಷತೆ ವಹಿಸಿದ್ದರು.ಅಜೆಂಡಾ ಮೇಲಿನ ಚರ್ಚೆಯ ವೇಳೆಆರೋಗ್ಯಾಧಿಕಾರಿ ರತ್ನಪ್ರಸಾದ್ ಅವರು,ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಿಂದಹೊರಡಿಸಲಾದ ಸುತ್ತೋಲೆಯನ್ನು ಸಭೆಯ ಮುಂದಿಟ್ಟರು.
ಹೊರಗುತ್ತಿಗೆ ಮೂಲಕ ಘನತ್ಯಾಜ್ಯವಿಲೇವಾರಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತಿದ್ದು,ಈ ಸಂದರ್ಭದಲ್ಲಿಮನೆ,ಮನೆಯಿಂದ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿಗೆ ಅಸಾಧ್ಯವಾಗಿರುವುದರಿಂದ ಈ ಹಿಂದ2016ರ ಸೆ.22 ರಂದು ಕೈಗೊಂಡ ನಿರ್ಣಯದಂತೆ ಸ್ವಯಂಘೋಷಿತ ಆಸ್ಥಿ ತೆರಿಗೆಯ ಜೊತೆಯಲ್ಲೆತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿಗೆ ಕೌನ್ಸಿಲ್ ಅನುಮತಿ ನೀಡುವಂತೆ ಆರೋಗ್ಯಾಧಿಕಾರಿರತ್ನಪ್ರಸಾದ್ ಕೋರಿದರು.ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ 3.11 ಕೋ.ರೂ.ವಿನವಿಸ್ತ್ರತ ವರದಿಯನ್ನು ಸಿದ್ದಪಡಿಸಿ ಆಡಳಿತಾತ್ಮಕ ಮಂಜೂರಾತಿಯನ್ನು ಕೂಡಪಡೆದುಕೊಳ್ಳಲಾಗಿದೆ.
ಪಾಲಿಕೆ ಸಹಿತ ಮೂಡಬಿದ್ರೆ ಪುರಸಭೆ,ಪುತ್ತೂರು ನಗರಸಭೆಯಲ್ಲೂಇಂತಹ ವ್ಯವಸ್ಥೆ ಜಾರಿಯಲ್ಲಿದೆ ಎಂದು ಸಭೆಯ ಗಮನಕ್ಕೆ ತಂದರು.ಇದನ್ನು ಬಲವಾಗಿಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರಾದ ಗಂಗಾಧರ್,ಬಿ.ಪ್ರವೀಣ್ ಕೆಲ ವಾಢ್೯ಗಳಿಗೆತ್ಯಾಜ್ಯ ವಿಲೇವಾರಿಯ ವಾಹನವೇ ಹೋಗುತ್ತಿಲ್ಲ , ನಮ್ಮ ವಾರ್ಡಿಗಂತು ವಾಹನಗಳು ಬಾರದೆವಾರವೇ ಕಳೆಯಿತು ಎಂದಾಗ ಸದಸ್ಯೆ ಸಂಜೀವಿ ಅವರು ಧ್ವನಿಗೂಡಿಸಿ ತನ್ನ ವಾರ್ಡಿಗೂತ್ಯಾಜ್ಯ ಸಂಗ್ರಹ ಬರುವುದೇ ಇಲ್ಲ,ಅಲ್ಲಿ ನಾಗರಿಕರು ಕಸ,ತ್ಯಾಜ್ಯವನ್ನು ರಸ್ತೆ ಬದಿಚರಂಡಿಗೆ ಎಸೆಯುತ್ತಿದ್ದಾರೆ ಎಂದ ದೂರಿದರು. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿಪುರಸಭೆಗೆ ಈವರೆಗೂ ಸರಿಯಾದ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದು,ಮತ್ತೆ ಸ್ವಯಂ ಘೋಷಿತಆಸ್ತಿ ತೆರಿಗೆಯ ಜೊತೆಯಲ್ಲಿ ಶುಲ್ಕ ವಸೂಲಾತಿ ಜನರಿಗೆ ಹೊರೆಯಾಗಲಿದೆ ಎಂದು ಸದಸ್ಯರಾದಪ್ರವೀಣ್,ಗಂಗಾಧರ್ ವಾದಿಸಿದರು.
ಈಪ್ರಸ್ತಾಪವನ್ನುಕೈಬಿಡದಿದ್ದರೆ,ಧರಣಿಕುಳಿತುಕೊಳ್ಳುವಎಚ್ಚರಿಕೆಯನ್ನುಸದಸ್ಯಪ್ರವೀಣ್ನೀಡಿದರೆ,ಕಸಮಂಗಳೂರಿಗೆಸಾಗುತ್ತದೋ,ಕಂಚಿನಡ್ಕಪದವಿಗೆ ಹೋಗುತ್ತದೋ ಎಂದು ಸದಸ್ಯ ದೇವದಾಸ ಶೆಟ್ಟಿಪ್ರಶ್ನಿಸಿದರು. ಕೊನೆಗೆ ಸದಸ್ಯ ಪ್ರವೀಣ್ ಅವರ ಆಕ್ಷೇಪವನ್ನು ದಾಖಲಿಸಿ ಸ್ವಯಂ ಘೋಷಿತಆಸ್ತಿ ತೆರಿಗೆಯ ಜೊತೆಯಲ್ಲೇ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿಗೆ ನಿರ್ಧರಿಸಲಾಯಿತು.
*ಯೋಜನಾನಿರ್ದೇಶಕರ ವಿರುದ್ಧ ಆಕ್ರೋಶ*:
ಕಳೆದ ಸಾಲಿನ ಬಜೆಟ್ ಲೆಕ್ಕಪತ್ರದಲ್ಲಿಲಕ್ಷಾಂತರ ರೂ.ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಪುತ್ತೂರು ನಗರಸಭೆಯಲೆಕ್ಕಾಧಿಕ್ಷಕರು ಸಮರ್ಪಕ ವರದಿ ನೀಡಿದರೂ,ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾನಿದೇಶಕರು ಲೆಕ್ಕಾಧಿಕ್ಷರು ಯಾವುದೇ ವ್ಯತ್ಯಾಸವಿಲ್ಲ ಎಂದು ವರದಿ ಜಮಾ-ಖರ್ಚನ್ನುಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆಪಡೆಯಲು ಪತ್ರಬರೆದಿರುವುದನ್ನು ವಿಪಕ್ಷಸದಸ್ಯರಾದ ದೇವದಾಸ ಶೆಟ್ಟಿ ಅವರು ಸಭೆಯ ಗಮನಸೆಳೆದಾಗಸಭೆಯಲ್ಲಿ ಹಾಜರಿದ್ದಲೆಕ್ಕಾಧಿಕ್ಷರು ಒಂದು ಕ್ಷಣ ಅಚ್ಚರಿಗೊಳಗಾದರು.ಆಗ ಮಧ್ಯ ಪ್ರವೇಶಿಸಿದ ಸದಸ್ಯ ಗೋವಿಂದಪ್ರಭು ಅವರು ಈ ವಿಚಾರದಲ್ಲಿ ಯೋಜನಾ ನಿರ್ದೇಶಕರಿಗೆ ಆರು ಲಿಖಿತ ದೂರು ನೀಡಿದರೂಕನಿಷ್ಠ ಸ್ಪಂದಿಸುವ ಸೌಜನ್ಯವಿಲ್ಲದ ಇಂತಹ ಅಧಿಕಾರಿಯಿಂದ ಮತ್ತೇನು ನಿರೀಕ್ಷಿಸಲುಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 14 ನೇ ಹಣಕಾಸು ಯೋಜನೆಯಲ್ಲಿ ಸದಸ್ಯರಿಗೆಗೌರವಧನ,ನೌಕರರಿಗ ಸಂಬಳ ಕೊಡಲು ಅವಕಾಶವಿಲ್ಲದಿದ್ದರೂ ಇಲ್ಲಿ ಬಳಕೆ ಮಾಡಲಾಗಿದೆ ಎಂದುಸದಸ್ಯ ದೇವದಾಸ ಶೆಟ್ಟಿ ಲೆಕ್ಕಾದಿಕ್ಷರ ಗಮನಕ್ಕೆ ತಂದರು, ಕಳೆದ ಒಂದು ವರ್ಷದಿಂದಬಜೆಟ್ ನಲ್ಲಾಗಿರುವ ಲೋಪ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ,ಇದೀಗ 33 ಲಕ್ಷ ರೂ.ವಿನಷ್ಟವ್ಯತ್ಯಾಸ ಕಂಡು ಬರುವುದರಿಂದ ಇದರ ಲೆಕ್ಕ ಚುಕ್ತಾ ಅಗದೆ ಮಂಜೂರಾತಿಗೆಆಕ್ಷೇಪಿಸಿದರು. ಆಗ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು,ಪುರಸಬೆಯಲ್ಲಿ ಅಕೌಂಟೆಂಟ್ ಹುದ್ದೆ ಖಾಲಿ ಇದ್ದು,ಸಿಎ ಕಲಿತಿರುವ ನುರಿತ ಅಕೌಂಟೆಂಟ್ನಿಯುಕ್ತಗೊಳಿಸಲು ಅನುಮತಿ ಕೇಳಿದರು.ತಕ್ಷಣ ತಾತ್ಕಾಲಿಕ ನೆಲೆಯಲ್ಲಿ ಈ ಹುದ್ದೆ ಭರ್ತಿಗೊಳಿಸಲು ನಿರ್ಧರಿಸಲಾಯಿತು. ಹೊಸ ಅಕೌಂಟ್ಂಟ್ ನಿಯುಕ್ತಿಯಾದ ಬಳಿಕ ಬಜೆಟ್ ನಲ್ಲಾದಲೋಪ ಸರಿಪಡಿಸಿ ಮುಂದಿನ ಸಾಮಾನ್ಯಸಭೆಗೆ ಮಂಡಿಸುವ ಭರವಸೆಯ ಹಿನ್ನಲೆಯಲ್ಲಿ ಈಚರ್ಚೆಗೆ ತೆರೆ ಬಿತ್ತು.ಪ್ರಸ್ತಾಪವನ್ನು ಮುಂದಿನ ಸಭೆಗೆ ಮುಂದೂಡಲಾಯಿತು.
*ಪೂರ್ವಭಾವಿ ಸಭೆಗೆ 57 ಸಾ.ರೂ.ಖರ್ಚು* !
ವಿವಿಧಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ,ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತಮುಖ್ಯಮಂತ್ರಿಯವರು ಬಂಟ್ವಾಳಕ್ಕಾಗಮಿಸಿದ ಹಿನ್ನಲೆಯಲ್ಲಿ ಸಚಿವರೊಂದಿಗೆ ಅಧಿಕಾರಿಗಳಪೂರ್ವಭಾವಿ ಸಭೆಯ ಊಟ,ಉಪಹಾರಕ್ಕೆ 57,469 ರೂ.ಖರ್ಚು ಮಾಡಲಾಗಿದೆ ಯೇ ? ಅದೇನುಬಾಡೂಟ ಅಗಿತ್ತಾ ? ಎಂಬ ಪ್ರಶ್ನೆ ಸದಸ್ಯರಾದ ಗೋವಿಂದ ಪ್ರಭು,ದೇವದಾಸಶೆಟ್ಟಿಯವರಾದಾಗಿತ್ತು.ಈ ವಿಚಾರ ಸಭೆಯಲ್ಲಿ ಕೊಂಚ ಕಾವೇರಿದ ಚರ್ಚೆಗೂಕಾಣವಾಯಿತು.ಇದಕ್ಕೆ ಸಮಜಾಯಿಷಿ ನೀಡಿದ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ,ಪುರಸಭಾ ವ್ಯಾಪ್ತಿಯಲ್ಲಿ ಆ ಕಾರ್ಯಕ್ರಮ ನಡೆದಿತ್ತು. ಒಂದು ಲಕ್ಷಕ್ಕೂ ಅಧಿಕ ಖರ್ಚಆಗಿತ್ತು. ಪುರಸಭೆ 57 ಸಾವಿರ ಪಾವತಿಸಿದರೆ,ಉಳಿದ ಹಣ ತಾಲೂಕು ಆಡಳಿತ ನೀಡಿದೆ ಎಂದಾಗಖರ್ಚಿನ ಕುರಿತು ಬಿಲ್ಲು ಸಭೆಗೆ ಹಾಜರುಪಡಿಸುವಂತೆ ಸದಸ್ಯ ಪ್ರಭು ಸೂಚಿಸಿದರು.ಕೊನೆಗೆಬಿಲ್ಲು ಪರಿಶೀಲಿಸಿದಾಗ ಪೂರ್ವಭಾವಿ ಸಭೆಗೆ 9200 ರೂ.ಮುಖ್ಯಮಂತ್ರಿಯವರಕಾರ್ಯಕ್ರಮಕ್ಕೆ 17 ಸಾ.ರೂ.ವ್ಯಯ ಮಾಡಲಾಗಿದೆ.ಸಿಬಂದಿಗಳ ಎಡವಟ್ಟಿನಿಂದಗೊಂದಲವುಂಟಾಗಿದೆ ಎಂದು ಮುಖ್ಯಾಧಿಕಾರಿ ಸ್ಪಷ್ಟ ಪಡಿಸಿದರು.
*ಯಾವ ಅನುದಾನದಲ್ಲಿ ಕಾಮಗಾರಿ*:
ಗೂಡಿನಬಳಿಯಲ್ಲಿ ರಸ್ತೆ ಕಾಮಗಾರಿಯೊಂದಕ್ಕೆಕೆಲದಿನಗಳ ಹಿಂದೆ ಸಚಿವರು ಶಿಲಾನ್ಯಾಸ ನೆರವೇರಿಸಲಾಗಿದೆ.ಜಿಪಂಸದಸ್ಯರು,ಪುರಸಭಾಧ್ಯಕ್ಷರು,ಮುಖ್ಯಾಧಿಕಾರಿಯವರು ಎಲ್ಲರೂ ಇದ್ದರು. ಆದರೆ ಆದೇವಾರ್ಡಿನ ಸದಸ್ಯನಾದ ನನನ್ನು ಆಹ್ವಾನಿಸಿಲ್ಲ,ಆಗ ತಾನುಅಲ್ಲೇ ಪಕ್ಕದಲ್ಲೆ ಇದ್ದೆಇದರಿಂದ ಸ್ಥಳೀಯವಾಗಿ ತಾನು ಮುಜಗರಕ್ಕೊಳಗಾಗುವಂತೆ ಮಾಡಿದೆ ಎಂದು ಸದಸ್ಯ ಇಕ್ಬಾಲ್ಗೂಡಿನಬಳಿ ಅಸಮಾಧಾನ ವ್ಯಕ್ತಪಡಿಸಿದರು ಅಭಿವೃದ್ದಿಗೆ ನನ್ನ ಸಹಮತವಿದೆ.ಇದನ್ನು ಯಾವ
ಅನುದಾನದಿಂದ ಮಾಡಲಾಗುತ್ತಿದೆ ಎಂಬುದನ್ನಾದರೂ ತಿಳಿಸಿ ಅಥವಾ ಚುನಾವಣೆಸಮೀಪಿಸುವುದರಿಂದ ಓಟಿನ ಬೇಟೆಗಾಗಿ ಕೇವಲ ಶಿಲಾನ್ಯಾಸ ಮಾಡಲಾಗಿದೆಯೇ ಎಂದು ಸದಸ್ಯಇಕ್ಬಾಲ್ ಸ್ಪಷ್ಟನೆ ಬಯಸಿದರು.ಈ ಸಂದರ್ಭ ಮುಖ್ಯಾಧಿಕಾರಿ,ಅಧ್ಯಕ್ಷರು,ಉಪಾಧ್ಯಕ್ಷರುಮುಖ,ಮುಖ ನೋಡಿಕೊಂಡರು.ದಿಡೀರನೇ ಈ ಕಾರ್ಯಕ್ರಮ ನಡೆದಿದೆ.ನಮಗೂ ಅಲ್ಲಿ ಬಂದ ಮೇಲೆ
ಗೊತ್ತಾಗಿದೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟ ಸಮಜಾಯಿಷಿಕೆ ನೀಡಲುಯತ್ನಿಸಿದರಲ್ಲದೆ ಜಿಪಂ ಸದಸ್ಯರ ಅನುದಾನದಿಂದ ಮಾಡಲಾಗುತ್ತಿದೆ ಎಂದುಹೇಳಿದರೆ,ಅಲ್ಪಸಂಖ್ಯಾತ ನಿಧಿಯಿಂದ ಕಾಮಗಾರಿ ನಡೆಯುತ್ತದೆ ಎಂದು ಇಂಜಿನಿಯರ್ಡೊಮೆನಿಕ್ ಡಿಮೆಲ್ಲೋ ಹೇಳಿದರು.ಯಾವ ಅನುದಾನದಿಂದ ಎಂದು ಗೊತ್ತಿಲ್ಲದೆ ಕಾಮಗಾರಿ ಹೇಗೆಮಾಡಲಾಗುತ್ತಿದೆ ಎಂದು ಪ್ರಭು ಪ್ರಶ್ನಿಸಿದರೆ,ಪುರಸಭಾವ್ಯಾಪ್ತಿಯಲ್ಲಿ ಜಿಪಂಅನುದಾನದಿಂದ ಕಾಮಗಾರಿ ನಡೆಸಲು ಅವಕಾಶ ಇದೆಯೇ ಎಂದು ದೇವದಾಸ ಶೆಟ್ಟಿಪ್ರಶ್ನಿಸಿದರು.ತಕ್ಷಣ ಯು ಟನ್೯ ಹೊಡೆದ ಮುಖ್ಯಾಧಿಕಾರಿ ಅಲ್ಪಸಂಖ್ಯಾತನಿಧಿಯಿಂದಎಂದು ಸಮಜಾಯಿಷಿ ನೀಡಿದರು.ಒಟ್ಟಾರೆ ಯಾವ ಅನುದಾನದಿಂದ ಕಾಮಗಾರಿ ಅಗುತ್ತಿದೆ ಎಂದು
ನನಗೆ ತಿಳಿಸಿ ಎಂದು ಇಕ್ಬಾಲ್ ಅಧ್ಯಕ್ಷರನ್ನು ಒತ್ತಾಯಿಸಿ ಚರ್ಚೆಗೆ ತೆರೆ ಎಳದರು.ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿವೇದಿಕೆಯಲ್ಲಿದ್ದರು.ಸದಸ್ಯರಾದ ಮಹಮ್ಮದ್ ಶರೀಫ್,ಜಗದೀಶ್ ಕುಂದರ್,ಬಿ.ಮೋಹನ್, ಮೊನೀಶ್ಆಲಿ,ಚಂಚಲಾಕ್ಷಿ,ಜಸಿಂತಾ,ಸುಗುಣ ಕಿಣಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
