ಕಾಂಜಿಲಕೊಡಿ: ಎಸ್ಕೆಎಸ್ಸೆಸ್ಸೆಫ್ ಕಾಂಜಿಲಕೊಡಿ ಶಾಖೆಯ ಮಹಾಸಭೆ ಕೈಕಂಬ ವಲಯ ಉಪಾಧ್ಯಕ್ಷ ಶರೀಫ್ ಮಳಲಿ ಅಧ್ಯಕ್ಷತೆಯಲ್ಲಿ ಇಲ್ಲಿನ ಬದ್ರುಲ್ ಹುದಾ ಮಸೀದಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯನ್ನು ಬದ್ರುಲ್ ಹುದಾ ಮಸೀದಿ ಖತೀಬ್ ಉಸ್ತಾದ್ ಖಲೀಲ್ ದಾರಿಮಿ ಉದ್ಘಾಟಿಸಿ, ಸುನ್ನತ್ ಜಾಮಾತಿನ ಆದರ್ಶಗಳ ಕುರಿತು ಮಾಹಿತಿ ನೀಡಿದರು.
ಜಂಇಯತುಲ್ ಮುಅಲ್ಲಿಮಿನ್ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಉಸ್ತಾದ್ ಮಾತನಾಡಿ, ಯುವ ಜನತೆ ಇಂತಹ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜಮುಕಿ ಚಟುವಟಿಕೆಗಳಲ್ಲಿ ಭಾಗಿಯಾಗ ಬೇಕು ಎಂದು ಕರೆ ನೀಡಿದರು.
ಈ ವೇಳೆ 2018-20ನೇ ಸಾಲಿನ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬದ್ರುಲ್ ಹುದಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ, ಆರೀಫ್ ಕಮ್ಮಾಜೆ, ಎಂ.ಎಚ್ ಹಾಜಿ ಅಡ್ಡೂರು, ಕೈಕಂಬ ವಲಯ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾಸ್ಟರ್, ಕೌನ್ಸಿಲರ್ ಮುಸ್ತಫಾ ಸೈಟ್, ದಾವೂದ್ ಸೈಟ್, ವಲಯ ಕೋಡಿನೇಟರ್ ಅಬ್ದುಲ್ ಸಲಾಂ ಮತ್ತಿತರರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ: ಸಮಿತಿಯ ನೂತನ ಅಧ್ಯಕ್ಷರಾಗಿ ಹಾರೀಸ್ ಕಳಸಗುರಿ, ಉಪಾಧ್ಯಕ್ಷರಾಗಿ ಶಮೀರ್ ನೂಯಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ, ಜತೆ ಕಾರ್ಯದರ್ಶಿಯಾಗಿ ನೌಫಲ್ ಕೊಡಿಬೆಟ್ಟು, ಕೋಶಾದಿಕಾರಿ ಮೊಹಮ್ಮದ್ ಸೆರೀಫ್ ಪೊನ್ನೆಲ, ಉಪಸಮಿತಿ ಉಸ್ತುವಾರಿ ಕಾರ್ಯದರ್ಶಿಯಾಗಿ ಸಹಚಾರಿ ಮೊಹಮ್ಮದ್, ಶರೀಫ್ ನೂಯಿ , ಸರ್ಗಾಲಯಂ ಶಾಫಿ ಕಳಸಗುರಿ, ಟ್ರೆಂಡ್ ಅಬ್ದುಲ್ ರಶೀದ್ ಪೊನ್ನೆಲ, ವಿಕಾಯ ಶಾಹುಲ್ ಹಮೀದ್ ನೂಯಿ ಹಾಗೂ ಇಬಾದ್ ಅಬ್ದುಲ್ ಅಝೀಝ್ ಪೊನ್ನೆಲ ಅವರನ್ನು ಆಯ್ಕೆ ಮಾಡಲಾಯಿತು. ಕ್ಲಷ್ಟರ್ ಕೌನ್ಸಿಲರ್ ರಾಗಿ ಮೊಹಮ್ಮದ್ ಕುಂಞಿ ಮಾಸ್ಟರ್, ದಾವೂದ್, ಸಫ್ವಾ ನ್ ಹಾಗೂ ಅಬ್ದುಲ್ ಜಬ್ಬಾರ್ ಅವರನ್ನು ನೇಮಿಸಲಾಯಿತು.

