ಬಜ್ಪೆ: ದಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ತೆರಳುತ್ತಿದ್ದ ಯುವಕ-ಯುವತಿಯಯನ್ನು ತಡೆದು ಹಲ್ಲೆ ನಡೆಸಿದ ಘಟನೆ ಇಲ್ಲಿನ ಅದ್ಯಪಾಡಿ ಬಳಿ ಶುಕ್ರವಾರ ತಡ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ಈ ಯುವಕ-ಯುವತಿ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸದಲ್ಲಿದ್ದವರೆನ್ನಲಾಗಿದ್ದು, ಇವರು ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಾಪಸ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಹಿಂಬಂದಿಯಿಂದ ವಾಹನದಲ್ಲಿ ಬಂದ 7ಮಂದಿ ದುಷ್ಕರ್ಮಿಗಳ ಗುಪೊಂದು ಇವರನ್ನು ತಡೆಯಲು ಯತ್ನಿಸಿದ್ದು, ಇದನ್ನರಿತ ಕಾರಿನ ಯುವಕ ಅತೀ ವೇಗವಾಗಿ ಚಲಿಸಿದ ಪರಿಣಾಮ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದರಿಂದ ಕಾರು ಹದಗೆಟ್ಟು ನಿಂತಿದೆ. ಈ ವೇಳೆ ದುಷ್ಕರ್ಮಿಗಳು ಸ್ಥಳಕ್ಕಾಗಮಿಸಿ ಯುವಕ ಯುವತಿಯರಿಗೆ ಥಳಿಸಿದಲ್ಲದೆ, ಅವರ ಬಳಿ ಇದ್ದ ಚಿನ್ನದ ಸರ, ಮೊಬೈಲ್, ಎಟಿಎಂ ಕಾರ್ಡ್ ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಯುವಕನನ್ನು ಅತ್ತಾವರ ಆಸ್ಪತ್ರಗೆ ದಾಖಲಿಸಲಾಗಿದ್ದು, ಇನ್ನು ದುಷ್ಕರ್ಮಿಗಳ ಮಾಹಿತಿ ಮಾಹಿತಿ ಲಭಿಸಿಲ್ಲ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

