Ramya-criticizes-PM-Modi

ಚುನಾವಣೆಗಳು ಹತ್ತಿರುವಾಗುತ್ತಿದ್ದ ರಾಜಕೀಯ ನಾಯಕರುಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗುವುದು ನಮ್ಮಲ್ಲಿ ಸರ್ವೆ ಸಾಮಾನ್ಯ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಪರಿವರ್ತನೆ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಮೋದಿ ಭಾಷಕ್ಕೆ ಟಾಂಗ್ ನೀಡಿ ಟ್ವಿಟ್ ಮಾಡಿ ಸಾಕಷ್ಟು ಸದ್ದು ಮಾಡಿದ್ದ ನಟಿ, ಮಾಜಿ ಸಂಸದೆ ರಮ್ಯ ಅವರು ಈಗ ಮತ್ತೊಂದು ಟ್ವಿಟ್ ಮಾಡಿ ಸದ್ದು ಮಾಡಿದ್ದಾರೆ.

ಅಂದ ಹಾಗೇ ಈ ಬಾರಿ ರಮ್ಯ ಅವರ ಟ್ವಿಟ್ ಕೋಪಕ್ಕೆ ಸಿಕ್ಕಿ ಹಾಕಿಕೊಂಡಿರುವುದು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್. ಹೌದು, ಲೋಕಪಾಲ್ ಮಸೂದೆ ಬಗ್ಗೆ, ನ್ಯಾ. ಲೋಹಿಯಾ ಸಾವಿನ ಬಗ್ಗೆ, ಅಮಿತ್ ಶಾ ಕುರಿತು ಮಾತನಾಡೋಣ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ರಾಜೀವ್ ಚಂದ್ರಶೇಖರ್ ಪೂರ್ಣ ಪಟ್ಟಿ ಬಗ್ಗೆ ಮಾತನಾಡೋಣ ಎಂದು ಹೇಳಿದ್ದರು. ಆದರೆ ಸಿ.ಎಂ ಸಿದ್ದರಾಮಯ್ಯ ಅವರು ಮರು ಉತ್ತರ ನೀಡುವಷ್ಟರಲ್ಲಿ ರಾಜೀವ್ ಚಂದ್ರಶೇಖರ್ ಮೇಲೆ ಮುಗಿಬಿದ್ದಿರುವ ರಮ್ಯ ನಾನಾ ವಿಚಾರ ರಿಟ್ವೀಟ್ ಮಾಡಿ ಪ್ರಶ್ನೆ ಕೇಳಿ ರಾಜೀವ್ ಅವರನ್ನು ಗಲಿಬಿಲಿಗೊಳಿಸಿದ್ದಾರೆ.

ಕೋರಮಂಗಲದಲ್ಲಿ ಕೆಎಂಎಫ್ಗೆ ಭೂಮಿ ನೀಡಿರುವ ವಿಚಾರ, ಎಸ್ಸಿಜಡ್ಗೆ ಹಾಸನದಲ್ಲಿ ಜಮೀನು ನೀಡಿರುವ ವಿಚಾರ, ಬೆಂಗಳೂರು ಏರ್ಪೋರ್ಟ್ಗೆ 75 ಎಕರೆ ಜಮೀನು ನೀಡಿರುವುದು ಹಾಗೂ ದಾಬಸ್ ಪೇಟೆಯಲ್ಲಿ ಕೆಐಎಡಿಬಿ ಅಡಿ ಕಾರ್ಖಾನೆಗೆ ಭೂಮಿ ಮಂಜೂರು ಮಾಡಿರುವ ವಿಚಾರವನ್ನೂ ಇಟ್ಟುಕೊಂಡು ಮರು ಟ್ವೀಟ್ ಮಾಡಿದ್ದಾರೆ. ಇದು ಫುಲ್ ಪಟ್ಟಿ, ಇದರ ಬಗ್ಗೆ ನಾನು ನಿಮಗೆ ಪ್ರಶ್ನೆ ಮಾಡುತ್ತೇನೆ.

ಇದಕ್ಕೆ ಉತ್ತರ ನೀಡಿ ಎಂದು ರಮ್ಯಾ ಪ್ರತಿಸವಾಲು ಎಸೆದಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯ ಪ್ರತಿಬಾರಿ ಟ್ವಿಟ್ ಮಾಡುವ ವೇಳೆಯಲ್ಲಿ ತಮ್ಮ ಪಕ್ಷದ ಇಮೇಜಿಗೆ ಡ್ಯಾಮೇಜ್ ಆಗದ ಹಾಗೇ ಟ್ವಿಟ್ ಮಾಡುತ್ತಿದ್ದು ತ್ವರಿತ ಹಾಗೂ ಚಾಕಚಕ್ಯತೆಯಿಂದ ತಮ್ಮ ಎದುರಾಳಿಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಬಿಸಿ ಮುಟ್ಟಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *