ಪೊಳಲಿ: ಮಾದುಕೋಡಿ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಫೆ. 10ರಂದು ಶನಿವಾರ ವರ್ಷಾವಧಿ “ಕೊರಗಜ್ಜನ ಕೋಲ”ವು ಜರುಗಲಿದೆ.
ಅಂದು ಬೆಳಗ್ಗೆ 7 ಗಂಟೆಗೆ 12 ಕಾಯಿ “ಗಣಹೋಮ, ನವಕಪ್ರದಾನ ಪ್ರಸನಃ ಪೂಜೆ.” ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯ ತನಕ ವಿವಿಧ ಭಜನಾ ಮಂಡಳಿಗಳಿಂದ “ಭಜನಾ ಸಂಕೀರ್ತನೆ” ನಂತರ ಅನ್ನಪ್ರಸಾದ. ಮಧ್ಯಾಹ್ನ 2 ರಿಂದ ಸಂಜೆ 6 ರತನಕ ಯಕ್ಷಗಾನ ತಾಳ ಮದ್ದಳೆ “ವೀರಮಣಿ ಕಾಳಗ” ರಾತ್ರಿ 7 ರಿಂದ ಕೊರಗಜ್ಜ ದೈವದ ಕೋಲಬಲಿ ಸೇವೆ ಜರುಗಲಿದೆ. ಎಂದು ಶ್ರೀ ಸಾಯಿ ಹೀಲಿಂಗ್ ಸೆಂಟರ್ ಮಾದುಕೋಡಿ ವಿಜಯ ಸುವರ್ಣ ಪೊಳಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
