ಮಂಗಳೂರು: ಸೊಮೇಶ್ವರ ಗ್ರಾಮದ ಕುತ್ತಾರು ಪದವಿನ ಸಿಲಿಕೋನಿಯ ಫ್ಲ್ಯಾಟ್ಗೆ ನುಗ್ಗಿ ಮಹಿಳೆಗೆ ಅವ್ಯಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಕಾಸರಗೊಡು ಜಿಲ್ಲೆಯ ಉಪ್ಪಳ ನಿವಾಸಿ ಮೊಹಮ್ಮದ್ ರಫೀಕ್ ಅಲಿಯಾಸ್ ನಪ್ಪಾಟೆ ರಫೀಕ್ ನನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ನಿಗ್ರಹದಳ ಬಂಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ರಫೀಕ್ ಅಲಿಯಾಸ್ ನಪ್ಪಟೆ ರಫೀಕ್ ಕುಖ್ಯಾತ ರೌಡಿಯಾಗಿದ್ದು, ಈತನ ವಿರುದ್ಧ ಮೂರು ಕೊಲೆ ಪ್ರಕರಣ ಹಾಗು ಕೊಲೆ ಯತ್ನ, ಕಿಡ್ನಾಪ್ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ.
ಈತನ ವಿರುದ್ಧ ಪುತ್ತೂರು ನಗರ ಹಾಗೊ ಪುತ್ತೂರು ಗ್ರಾಮಂತರ ಠಾಣೆಯಲ್ಲಿ ದಸ್ತಗಿರಿ ವಾರೆಂಟ್ ಬಾಕಿ ಇದ್ದು ನ್ಯಾಯಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆರೋಪಿಯನ್ನು ಕೆಸಿ ರೋಡ್ ಎಂಬಲ್ಲಿ ದಸ್ತಗಿರಿ ಮಾಡಲಾಗಿದೆ.

