images (1)

ಕೋಲ್ಕತ್ತಾ:  ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಸೇತುವೆ ತಡೆ ಗೋಡೆ ಢಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ 6 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಇಲ್ಲಿನ ದೌಲತ್‌ಬಾದ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬರಲಿಘಾಟ್‌‌ ಬಳಿ ಸೊಮವಾರ ಬೆಳಗ್ಗೆ ನಡೆದಿದೆ.

 ಈ ಬಸ್  ಶಿಖರ್‌ಪುರ್‌ದಿಂದ ಮಾಲ್ಡಾ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ದೌಲತ್‌ಬಾದ್‌ ನಲ್ಲಿನ ಸೇತುವೆವೊಂದರ ತಡಗೋಡೆಗೆ ಢಿಕ್ಕಿ ಹೊಡೆದು ನದಿಗೆ ಬಿದ್ದಿದ್ದು, ಪರಿಣಾಮ 6 ಮಂದಿ ಮುಳುಗಿದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಯಲ್ಲಿ ಮೃತಪಟ್ಟ ಪ್ರಯಾಣಿಕರಲ್ಲಿ  ಓರ್ವ ಮಹಿಳೆಯ ಮೃಹದೇಹ ಪತ್ತೆಯಾಗಿದ್ದು, ಇನ್ನೂ 5 ಮಂದಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಈ ಬಸ್‌ನಲ್ಲಿ ಎಷ್ಟು ಜನ ಪ್ರಯಾಣಿಕರಿದ್ದರು ಎಂಬುವುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *