protest

ಕುವೈತ್: ವೇತನ ದೊರೆಯದ ಹಿನ್ನಲೆಯಲ್ಲಿ ಭಾರತಕ್ಕೆ ವಾಪಾಸ್ಸಾಗಲು ಸಾಧ್ಯವಾಗದೆ ಅಲ್ಲಿ ಕುವೈತ್‌ನಲ್ಲಿ ಉಳಿದುಕೊಂಡಿರುವ ಹಲವರು ಭಾರತೀಯರ ವಿರುದ್ಧ ಯಾವುದೇ ದಂಡ ವಿಧಿಸದೇ ಇರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಹಲವು ಕಂಪನಿಗಳಲ್ಲಿ ದುಡಿಯುತ್ತಿದ್ದ ಭಾರತೀಯರಿಗೆ ಕಂಪನಿಗಳು ವೇತನ ನೀಡದೆ ವಂಚನೆ ಮಾಡುತ್ತಿವೆ. ಇದನ್ನು ವಿರೋಧಿಸಿ ಅಲ್ಲೇ ಅವರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಇದೀಗ ಕುವೈತ್ ಸರ್ಕಾರವೂ ಅವರ ಮೇಲೆ ದಂಡ ವಿಧಿಸುವುದಿಲ್ಲ ಎಂದಿದೆ. ಜ.29 ರಿಂದ ಫೆ.2ರವರೆಗೆ ಈ ನಿಯಮ ಅನ್ವಯಿಸಲಿದೆ. ನಿಗದಿಗಿಂತ ಹೆಚ್ಚು ದಿನ ಉಳಿಯಲು ಕುವೈತ್‌ನಲ್ಲಿ ದಿನಕ್ಕೆ ರೂ.424ದಂಡ ಪಾವತಿಸಬೇಕು.

ಭಾರತೀಯ ಪ್ರತಿಭಟನಾಕಾರರಿಗೆ ಶಾಹೀದ್‌ ಸಯೀದ್‌ ಸಾಕಷ್ಟು ಬೆಂಬಲ ನೀಡಿದ್ದರು. ಅಲ್ಲದೇ ನರೇಶ್‌ ನಾಯ್ಡು ಎಂಬುವರು ಕೂಡ ಪ್ರತಿಭಟನೆ ನಡೆಸಿದ್ದರು. ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತೆರಳಿದ್ದ ನರೇಶ್‌ ನಾಯ್ಡು ಭಾರತಕ್ಕೆ ತೆರಳುವುದಿಲ್ಲ ಎಂದು ಮನವಿ ಸಲ್ಲಿಸಿ, ವೇತನ ದೊರಕಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *