ನವದೆಹಲಿ: ಭಾನುವಾರ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಆಯ್ಕೆ ಆಗಿದ್ದ ಓಂ ಪ್ರಕಾಶ್ ರಾವತ್ ಇಂದು ಅಧಿಕಾರ ಸ್ವೀಕರಿಸಿದರು.
ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಎ.ಕೆ.ಜೋಟಿ ಸೋಮವಾರ ನಿವೃತ್ತರಾದರು. ಜೋಟಿ ಸ್ಥಾನಕ್ಕೆ ರಾವತ್ ನೇಮಕವಾಗಿದ್ದಾರೆ. ರಾವತ್ ಅವರು ಪಬ್ಲಿಕ್ ಎಂಟರ್‌ಪ್ರೈಸಸ್ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದಾರೆ.
ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಾಸಾ ಕೂಡ ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದಾರೆ.

