ಹೊಸದಿಲ್ಲಿ: ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಜ. 23 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಕುರಿತು ಕಾನೂನು ಸಚಿವಾಲಯ ಗೆಝೆಟ್ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಸದ್ಯದ ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋಟಿ ಸೋಮವಾರ ನಿವೃತ್ತರಾಗಲಿದ್ದು, ರಾವತ್ ಆ ಸ್ಥಾನಕ್ಕೆ ಬರಲಿದ್ದಾರೆ. ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ನೂತನ ಚುನಾವಣಾ ಆಯುಕ್ತರಾಗಲಿದ್ದಾರೆ.

