ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಬೀದಿ ಬದಿಯ ವ್ಯಾಪಾರಿಯೋರ್ವರನ್ನು ಕೊಲೆ ಮಾಡಿರುವ ದಾರುಣ ಘಟನೆ ಇಲ್ಲಿನ ಜಯನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಮೃತರನ್ನು ಪರಮಾನಂದ ಎಂದು ಗುರುತಿಸಲಾಗಿದೆ.
ಪರಮಾನಂದ ಅವರ ಅಂಗಡಿಗೆ ತಡರಾತ್ರಿ ವೇಳೆ ವ್ಯಾಪಾರಕ್ಕೆಂದು ಬಂದಿದ್ದ ಮೂವರು ಕ್ಷುಲ್ಲಕ ಕಾರಣಕ್ಕೆ ಪರಮಾನಂದ ಬಳಿ ಜಗಳಕ್ಕಿಳಿದು ಬಳಿಕ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಪನಗ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಬಳಿಕ ಪ್ರಕರಣ ದಾಖಲಿಸಿದ್ದಾರೆ.

