741

 ಕಾಸರಗೋಡು: ನಿಯಂತ್ರಣ ತಪ್ಪಿದ ಲಾರಿಯೊಂದು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷದಲ್ಲಿದ್ದ ತಾಯಿ ಮತ್ತು ಮಗಳು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಇಲ್ಲಿನ ಪೊಯಿನಾಚಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಮೃತಪಟ್ಟವರನ್ನು ಚಟ್ಟಂಚಾಲ್ ಬೆಂಡಿಚ್ಚಾಲ್ ಕನಿಯಕುಂಡದ ರಾಜ ರವರ ಪತ್ನಿ ಶೋಭಾ ( 32) ಮತ್ತು ಪುತ್ರಿ ವಿಸ್ಮಯ (8) ಎಂದು ಗುರುತಿಸಲಾಗಿದೆ.

ರಾಜ ( 37) ಆಟೋ ಚಾಲಕ ಕನಿಯಕುಂಡದ ಅಬ್ದುಲ್ ಖಾದರ್ ( 45) ಹಾಗೂ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು , ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಲಾರಿ ಚಾಲಕ ಹೊರತು ಪಡಿಸಿ ಉಳಿದವರ ಸ್ಥಿತಿ ಗಂಭೀರವಾಗಿದೆ.

ಕಾಞ೦ಗಾಡ್ ನಿಂದ ಮಂಗಳೂರಿಗೆ ರಬ್ಬರ್ ಶೀಟ್ ಹೇರಿಕೊಂಡು ತೆರಳುತ್ತಿದ್ದ ಲಾರಿ ಹಾಗೂ ಪುಲ್ಲೂರು ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಅಪಘಾತ ನಡೆದಿದೆ.ಅಪಘಾತದ ರಭಸಕ್ಕೆ ಲಾರಿ ಮಗುಚಿ ಆಟೋರಿಕ್ಷಾದ ಮೇಲೆ ಬಿದ್ದಿದ್ದು, ಈ ಸಂದರ್ಭದಲ್ಲಿ ರಾಜ ಮತ್ತು ಮತ್ತು ಆಟೋ ಚಾಲಕ ಅಬ್ದುಲ್ ಖಾದರ್, ಹೊರಕ್ಕೆಸೆಯಲ್ಪಟ್ಟರು. ನಜ್ಜುಗುಜ್ಜಾದ ಆಟೋ ರಿಕ್ಷಾದಿಂದ ಶೋಭಾ ಮತ್ತು ವಿಸ್ಮಯಳನ್ನು ಹೊರತೆಗೆದರೂ ಆಗಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಪಘಾತದ ಬಳಿಕ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

By suddi9

Leave a Reply

Your email address will not be published. Required fields are marked *